ಹೈದರಾಬಾದ್: ಬಹುಭಾಷಾ ನಟಿ ಸಾಯಿ ಪಲ್ಲವಿ ವಿಭಿನ್ನ ನಟನೆ ಮೂಲಕ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ನಟನೆಗೆ ಹೊರತಾಗಿಯೂ ಅವರ ವೈಯಕ್ತಿಕ ಜೀವನದಲ್ಲಿ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಬೋಲ್ಡ್ ಸ್ಟೇಟ್‍ಮೆಂಟ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಸಾಯಿ ಪಲ್ಲವಿ ಎಂದರೆ ಅದೊಂದು ಚಾರ್ಮ್ ಎಂಬುದು ತಿಳಿದಿರುವ ವಿಚಾರ. ಅವರ ಅಭಿಮಾನಿಗಳೂ ಸಹ ಅವರನ್ನು ಅಷ್ಟೇ ಇಷ್ಟಪಡುತ್ತಾರೆ. ವೈಯಕ್ತಿಕ ಜೀವನದಲ್ಲಿಯೂ ಸಹ ಸಾಯಿ ಪಲ್ಲವಿ ತುಂಬಾ ವಿಭಿನ್ನ. ಹೀಗಾಗಿ ಸಿನಿಮಾಗಳ ಆಯ್ಕೆ ವಿಚಾರದಲ್ಲಿಯೂ ಎಚ್ಚರ ವಹಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರು ಇದೀಗ ಒಂದು ಸ್ಟೇಟ್‍ಮೆಂಟ್ ನೀಡಿದ್ದಾರೆ.
ಮೇಕಪ್‍ಗೆ ಹೆಚ್ಚು ಒತ್ತುಕೊಡದೆ ಸಹಜ ಸೌಂದರ್ಯ ಹಾಗೂ ಅಭಿನಯದ ಮೂಲಕವೇ ಹೆಸರು ಮಾಡಿದ್ದಾರೆ. ಈ ಹಿಂದೆ ಮೇಕಪ್ ವಿಷಯವಾಗಿ ಮಾತನಾಡುವಾಗ ಸಹಜ ಸೌಂದರ್ಯಕ್ಕೆ ಮಹತ್ವ ಕೊಡುವುದಾಗಿ ಹೇಳಿದ್ದ ನಟಿ, ಕಾಸ್ಮೆಟಿಕ್ ಕಂಪೆನಿಯೊಂದರ ಜಾಹೀರಾತನ್ನೂ ತಿರಸ್ಕರಿಸಿದ್ದರು. ಈ ಮೂಲಕ ಸಹಜ ಸೌಂದರ್ಯಕ್ಕೆ ಒತ್ತು ನೀಡುವುದಾಗಿ ತಿಳಿಸಿದ್ದರು.
ಮಲಯಾಳಂ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿಗೆ ಇದೀಗ ತೆಲುಗು ಹಾಗೂ ತಮಿಳಿನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ‘ಲವ್ ಸ್ಟೋರಿ’ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ಸಾಯಿ ಪಲ್ಲವಿ ನಟಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಶೂಟಿಂಗ್ ಸ್ಥಗಿತವಾಗಿದೆ.
ಇದೇ ಸಂದರ್ಭದಲ್ಲಿ ಅವರು ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಕುರಿತು ಮಾತನಾಡಿದ್ದು, ಈ ರೀತಿಯಾಗಿ ನಟಿಸಲು ನನಗೆ ಇಷ್ಟವಿಲ್ಲ. ಹಾಗೆ ನಟಿಸಲೇಬೇಕಾಗಿ ಬಂದರೆ ಸಿನಿಮಾವನ್ನೇ ಬಿಡುತ್ತೇನೆ ಎಂದಿದ್ದಾರೆ. ಈ ಮೂಲಕ ಲಿಪ್ ಲಾಕ್ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಇದೇ ಕಾರಣಕ್ಕೆ ಈ ಹಿಂದೆ ಡಿಯರ್ ಕಾಮ್ರೇಡ್ ಹಾಗೂ ಸರಿಲೇರು ನೀಕೆವ್ವರು ಸಿನಿಮಾಗಳನ್ನೂ ಸಾಯಿ ಪಲ್ಲವಿ ಬಿಟ್ಟಿದ್ದರು ಎನ್ನಲಾಗಿದೆ. ಸಿನಿಮಾ ಕಥೆ ಡಿಮ್ಯಾಂಡ್ ಮಾಡಿದರೂ ನಾನು ಹಸಿಬಿಸಿ ದೃಶ್ಯಗಳಲ್ಲಿ ನಟಿಸುವುದಿಲ್ಲ. ಹಾಗೆ ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಮತ್ತೆ ವೈದ್ಯ ವೃತ್ತಿಗೆ ಮರಳುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.