Breaking News
Home / ಜಿಲ್ಲೆ / ಬೆಳಗಾವಿ / ಅಥಣಿ / ಶಾಸಕರು ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಿಗಳಿಗೆ ಶಾಸಕ ಮಹೇಶ ಕುಮಟಳ್ಳಿ ಪ್ರತಿಕ್ರಿಯಿಸಿದ್ದಾರೆ.

ಶಾಸಕರು ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಿಗಳಿಗೆ ಶಾಸಕ ಮಹೇಶ ಕುಮಟಳ್ಳಿ ಪ್ರತಿಕ್ರಿಯಿಸಿದ್ದಾರೆ.

Spread the love

ಅಥಣಿ: ಎಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದ್ರೂ ಗ್ರಾಮಗಳಿಗೆ ಭೇಟಿ ನೀಡದೆ ಶಾಸಕರು ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಿಗಳಿಗೆ ಶಾಸಕ ಮಹೇಶ ಕುಮಟಳ್ಳಿ ಪ್ರತಿಕ್ರಿಯಿಸಿದ್ದಾರೆ.

ಅಥಣಿ ಪಟ್ಟಣದ ಅತಿಥಿ ಗೃಹದಲ್ಲಿ ಇಂದು ಈ ವಿಚಾರವಾಗಿ‌ ಮಾತನಾಡಿದ ಅವರು, ಕೊರೊನಾ ಜಾಗೃತಿಗಾಗಿ ಗ್ರಾಮಗಳಿಗೆ ಭೇಟಿ ನೀಡಿದರೆ ನನ್ನ ಜತೆ ಹಲವಾರು ಜನರು ಸೇರುವುದರಿಂದ ಕಾನೂನು ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಜನರಿಗೆ ಉಪಯೋಗ ಆಗಬೇಕು ಹೋರತು ನಮ್ಮಿಂದ ತೊಂದರೆ ಆಗಬಾರದು ಎಂದರು.

ಕೆಲವು ಜನರು ಜೀವನಾವಶ್ಯಕ ಸಾಮಗ್ರಿಗಳನ್ನು ದಾನ ಮಾಡಿ ಪೋಟೋ ತೆಗೆದುಕೊಳ್ಳುವುದು ಶೋಕಿ ಆಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಪರೋಕ್ಷವಾಗಿ ಟೀಕಿಸಿದರು.

ಇಂತಹ ಸಂದರ್ಭದಲ್ಲಿಯೂ ಕೆಲವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ.
ತಾಲೂಕು ಆಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದರು

ಆಹಾರ ಪದಾರ್ಥಗಳು ಯಾರಾದರೂ ಬಡಕುಟುಂಬಗಳಿಗೆ ಕೊಡುದಿದ್ದರೆ ತಾಲೂಕು ಆಡಳಿತ ಅಥವಾ ಪೋಲೀಸ್ ಇಲಾಖೆಗೆ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಸರ್ಕಾರದ ನಿಯಮಗಳನ್ನು ಉಲ್ಲಂಘಿಸಬೇಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗತಿಕ ಮಹಾಮಾರಿ ಹೋಗಲು ಮನೆಯಲ್ಲಿ ಇರೋಣ ಎಂದು ಸಲಹೆ ನೀಡಿದರು.


Spread the love

About Laxminews 24x7

Check Also

ಫೆ. 17ರಂದು ಸಿಎಂ ಬೊಮ್ಮಾಯಿ ಬಚಾವೋ ಬಜೆಟ್‌: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

Spread the love ಕಲಬುರಗಿ: ರಾಜ್ಯದಲ್ಲಿ ಫೆ.17ರಂದು ಮಂಡನೆಯಾಗಲಿರುವುದು ಜನಸಾಮಾನ್ಯರ ಬದುಕು ಭದ್ರ ಮಾಡುವ ಬಜೆಟ್‌ ಅಲ್ಲ. ಅದು ಬಸವರಾಜ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ