Breaking News

ಕುಶಾಲತೋಪು ಸಿಡಿಸಿ ದಸರಾ ಗಜಪಡೆಗೆ ತಾಲೀಮು

Spread the love

ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆ ಸಜ್ಜಾಗುತ್ತಿದೆ. ಇವತ್ತು (ಅ.7) ದಸರಾ ಗಜಪಡೆಗೆ  ಕುಶಾಲತೋಪು ಸಿಡಿಸುವ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು.

ದಸರಾ ಮೆರವಣಿಗೆ ದಿನ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಬೆದರದಂತೆ ನೋಡಿಕೊಳ್ಳಲು ಈ ತಾಲೀಮು ನಡೆಸಲಾಗುತ್ತದೆ. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ನೇತೃತ್ವದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ನಡೆಯಿತು. 7 ಪಿರಂಗಿ ಗಾಡಿಗಳಲ್ಲಿ ಒಟ್ಟು 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಅಭ್ಯಾಸ ನಡೆಸಲಾಯಿತು.

ಈ ತಾಲೀಮಿನಲ್ಲಿ ಅಶ್ವದಳದ 45 ಕುದುರೆಗಳು ಹಾಗೂ ಗಜಪಡೆಯ 13 ಆನೆಗಳು ಭಾಗವಹಿಸಿದ್ದವು. ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪ ಹಾಗೂ ಶ್ರೀಕಂಠ ಆನೆಗಳು ಕುಶಾಲತೋಪಿನ ಸದ್ದಿಗೆ ತಾಲೀಮು ಪಡೆದವು.

ಪಿರಂಗಿಗಳ ಭಾರೀ ಸದ್ದಿನ ನಡುವೆಯೂ ಆನೆಗಳು ಮತ್ತು ಅಶ್ವಗಳು ಯಾವುದೇ ಆತಂಕಕ್ಕೆ ಒಳಗಾಗದೆ ಶಾಂತವಾಗಿ ನಿಂತು ತಾಲೀಮಿನಲ್ಲಿ ಭಾಗವಹಿಸಿದ್ದವು.


Spread the love

About Laxminews 24x7

Check Also

ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

Spread the loveಹುಬ್ಬಳ್ಳಿ: ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ  ನಡೆದಿದೆ. ಹುಬ್ಬಳ್ಳಿ ಉಣಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ