Breaking News

ಬೆಂಗಳೂರಿನ ಐಪಿಎಸ್‌ ಲೇಔಟ್‌ನಲ್ಲಿ ರೇವ್‌ಪಾರ್ಟಿ – ಮೂವರು ಅರೆಸ್ಟ್‌, ಮಹಿಳೆಯರ ರಕ್ಷಣೆ

Spread the love

ಬೆಂಗಳೂರು: ನಗರದ ಪ್ರತಿಷ್ಠಿತ ಐಪಿಎಸ್‌ ಲೇಔಟ್‌ನಲ್ಲಿ ರೇವ್‌ ಪಾರ್ಟಿ  ಆಯೋಜನೆ ಮಾಡಿದ್ದ ಅಡ್ಡೆ ಮೇಲೆ ಸಿಸಿಬಿ ಮಹಿಳಾ ಘಟಕ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಲಾಗಿದೆ.

ಪಾರ್ಟಿ ಆಯೋಜನೆ ಮಾಡಿದ್ದ ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಮಹಿಳಾ ಘಟಕ ನಿಷೇಧಿತ ಹುಕ್ಕಾ , ಇ-ಸಿಗರೇಟ್ ಹಾಗೂ ಮಧ್ಯ ಜಪ್ತಿ ಮಾಡಿದ್ದು, ಪಾರ್ಟಿಯಲ್ಲಿ ಸಿಲುಕಿದ್ದ ಮಹಿಳೆಯರನ್ನ ರಕ್ಷಣೆ ಮಾಡಲಾಗಿದೆ.

ಏನಿದು ರೇವ್‌ ಪಾರ್ಟಿ ಪ್ರಕರಣ?
ಬೆಂಗಳೂರಿನ ಪ್ರತಿಷ್ಠಿತ ಐಪಿಎಸ್‌ ಬಡಾವಣೆಯಲ್ಲಿ ರೇವ್‌ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದೀಕ್ಷಿತ್‌, ವೇದಾಂತ್‌ ಪಂಡಿತ್‌ ಹಾಗೂ ಶಂಕರ್‌ ಎಂಬ ಮೂವರು ಎಚ್‌ಎಸ್‌ಆರ್‌ ಲೇಔಟ್‌ನ 6ನೇ ಸೆಕ್ಟರ್, ಐಪಿಎಸ್ ಲೇಔಟ್‌ನ ಸಿ-9 ವಿಲ್ಲಾದಲ್ಲಿ ಭರ್ಜರಿ ಪಾರ್ಟಿ ಆಯೋಜನೆ ಮಾಡಿದ್ದರು. ಇದಕ್ಕಾಗಿ 20,000 ರೂ. ಬಾಡಿಗೆ ಕಟ್ಟಿ ʻರೆವ್ ಕೀ ಹಾಸ್ಪಿಟಾಲಿಟಿ ಸರ್ವಿಸ್ʼ ವಿಲ್ಲಾ  ಬುಕ್ ಮಾಡಲಾಗಿತ್ತು.

ಅಮಿಗೋಸ್ ಆಪ್ ಮೂಲಕ ಯುವಕ ಯುವತಿಯರನ್ನ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಬಾಯ್ಸ್‌ಗೆ 1,099 ರೂ., ಗರ್ಲ್ಸ್‌ಗೆ 499 ರೂ. ಎಂಟ್ರಿ ಫೀಸ್ ಕಲೆಕ್ಟ್‌ ಮಾಡಲಾಗಿತ್ತು. ಇಡೀ ರಾತ್ರಿ ಸರ್ವಿಸ್‌ ವಿಲ್ಲಾದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಗ್ಯಾಂಗ್‌, ಇ-ಸಿಗರೇಟ್‌, ಹುಕ್ಕಾ, ಮದ್ಯದ ಅಮಲಿನಲ್ಲಿ ತೇಲಾಡುತ್ತಿತ್ತು.

ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಘಟಕದಿಂದ ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ನಡೆಸಿ, ಮೂವರು ಆಯೋಜಕರನ್ನ ಬಂಧಿಸಿದೆ. ವಿಲ್ಲಾ ಮಾಲೀಕರ ವಿರುದ್ಧ ಹೆಚ್‌ಎಸ್‌ಆರ್‌ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇನ್ನು ಪಾರ್ಟಿಯಲ್ಲಿ ಸಿಲುಕಿದ್ದ ಮಹಿಳೆಯರನ್ನ ರಕ್ಷಣೆ ಮಾಡಿರುವ ಸಿಸಿಬಿ ಪೊಲೀಸರು ತನಿಖೆ ಮಂದುವರಿಸಿದ್ದಾರೆ.


Spread the love

About Laxminews 24x7

Check Also

ವೇಶ್ಯಾವಾಟಿಕೆ ಜಾಲ ಭೇದಿಸಿದ ಅಥಣಿ ಪೊಲೀಸರು; ಇಬ್ಬರು ಅರೆಸ್ಟ್

Spread the loveಚಿಕ್ಕೋಡಿ: ಬೆಳಗಾವಿ  ಜಿಲ್ಲೆಯ ಅಥಣಿ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ ಮೇಲೆ ಅಥಣಿ ವೃತ್ತದ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ