Breaking News

ದರ್ಶನ್ ಭೇಟಿಯಾದ ಧನ್ವೀರ್- ಮುನಿಸು ಮರೆಯಾಯ್ತಾ?

Spread the love

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸದಾ ದರ್ಶನ್ ಬೆನ್ನಿಗೆ ನಿಂತಿರುತ್ತಿದ್ದ ನಟ ಧನ್ವೀರ್ ಇತ್ತೀಚಿನ ದಿನಗಳಲ್ಲಿ ಅವರಿಂದ ಅಂತ ಕಾಪಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಇತ್ತು. ದರ್ಶನ್ ಮತ್ತು ಧನ್ವೀರ್ ನಡುವೆ ಯಾವುದೂ ಸರಿ ಇಲ್ಲ ಅಂತ ದರ್ಶನ್ ಬಳಗದಲ್ಲೇ ಮಾತುಗಳು ಕೇಳಿ ಬಂದಿದ್ದವು. ಇದೀಗ ದಿಢೀರ್ ಅಂತ ದರ್ಶನ್ಅವರನ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾದ ನಂತರ, ಅವರ ಕುಟುಂಬದ ಜೊತೆ ಸದಾ ಓಡಾಡಿಕೊಂಡಿದ್ದರು ಧನ್ವೀರ್. ಒಂದು ಅರ್ಥದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಾವಲಾಗಿದ್ದರು. ಧನ್ವೀರ್ ಹೊರತಾಗಿ ವಿಜಯಲಕ್ಷ್ಮಿ ಎಲ್ಲಿಯೂ ಹೋಗುತ್ತಿರಲಿಲ್ಲ. ಜೈಲಿಗೆ ಬರಲಿ, ದೇವಸ್ಥಾನಕ್ಕೆ ಹೋಗಲಿ ವಿಜಯಲಕ್ಷ್ಮಿ ಜೊತೆ ಧನ್ವೀರ್ ಇರುತ್ತಿದ್ದರು. ಆದರೆ ಇತ್ತೀಚೆಗೆ ಒಂಟಿಯಾಗಿಯೇ ವಿಜಯಲಕ್ಷ್ಮಿ ಓಡಾಡುತ್ತಿದ್ದರು.

ಕುಚಿಕುಗಳಂತಿದ್ದ ದರ್ಶನ್ ಮತ್ತು ಧನ್ವೀರ್ ನಡುವೆ ಅದೇನು ನಡೆಯಿತೋ ಗೊತ್ತಿಲ್ಲ. ಧನ್ವೀರ್ ಕೂಡ ಈ ಕುರಿತು ಮಾತಾಡಲಿಲ್ಲ. ಹಾಗಾಗಿ ಸಹಜವಾಗಿಯೇ ಕುತೂಹಲ ಮೂಡಿತ್ತು. ಮಂಗಳವಾರ ವಿಜಯಲಕ್ಷ್ಮಿ ಜೊತೆ ಧನ್ವೀರ್ ಮತ್ತೆ ಕಾಣಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ  ಜೈಲಿಗೆ ಜೊತೆಯಾಗಿಯೇ ಬಂದು ದರ್ಶನ್ ಅವರನ್ನ ಭೇಟಿ ಮಾಡಿದ್ದಾರೆ. ಈ ಭೇಟಿಯು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಧನ್ವೀರ್ ಮುನಿಸನ್ನು ಅಂತ್ಯ ಮಾಡುವುದಕ್ಕಾಗಿಯೇ ದರ್ಶನ್ ಕರೆಯಿಸಿಕೊಂಡಿದ್ದರು ಅಂತಾನು ಹೇಳಲಾಗುತ್ತಿದೆ.

ಈ ಭೇಟಿ ಸಾಕಷ್ಟು ನಿಗೂಢತೆಯನ್ನು ಹುಟ್ಟು ಹಾಕಿದೆ. ಪ್ರಶ್ನೆಗಳನ್ನು ಮೂಡಿಸಿದೆ. ಈ ಕುರಿತಂತೆ ಅವರೇ ಉತ್ತರಿಸಬೇಕು. ಮೂಲಗಳ ಪ್ರಕಾರ ಹಣಕಾಸಿನ ವ್ಯವಹಾರವೇ ದೂರ ಆಗಲು ಕಾರಣ ಅನ್ನುವ ಗುಸುಗುಸು ಕೂಡ ಇದೆ. ಯಾವುದು ಸತ್ಯ, ಯಾವುದು ಸುಳ್ಳು ಅನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ