Breaking News

 ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ

Spread the love

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮನ್ನ ನೋಡಲು ಕಾಯುತ್ತಿದ್ದ 16 ವರ್ಷದ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಜೊತೆಗೆ ಪುಟ್ಟ ಅಭಿಮಾನಿಯ ಆಸ್ಪತ್ರೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

16 ವರ್ಷದ ಬಾಲಕ ಆದರ್ಶ್, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಳ್ಳಾರಿ ಜಿಲ್ಲೆಯ ಹೊಸಪೇಟ್ ನಗರದ ಇಂದಿರ ನಗರ ನಿವಾಸಿಗಳಾದ ಹನಮಂತ್ ಮತ್ತು ರೇಖಾ ದಂಪತಿಯ ಹಿರಿಯ ಮಗನಾಗಿರುವ ಆದರ್ಶ್ ಹುಟ್ಟಿದ್ದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಪುನೀತ್ ರಾಜ್‍ಕುಮಾರ್ ಎಂದರೆ ಬಾಲಕನಿಗೆ ಪಂಚಪ್ರಾಣ. ಹೀಗಾಗಿ ಪುನೀತ್‍ರನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂದು ಕನಸು ಕಂಡಿದ್ದನು.

ಪುನೀತ್ ಅವರನ್ನು ಒಮ್ಮೆ ಆದರೂ ಆದರ್ಶ್ ಭೇಟಿ ಮಾಡಬೇಕು ಎಂದು ಆತನ ಪೋಷಕರು ಪ್ರಯತ್ನಿಸಿದ್ದಾರೆ. ಕಳೆದ ಎರಡು ಬಾರಿ ಪುನೀತ್ ಹೊಸಪೇಟೆಗೆ ಬಂದಾಗಲೂ ಪ್ರಯತ್ನಿಸಿದ್ದು, ಆದರೆ ನೂರಾರು ಅಭಿಮಾನಿಗಳ ಅಬ್ಬರದಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಬಾಲಕನ ಕನಸು ನನಸಾಗಿದೆ. ಪುನೀತ್ ರಾಜ್‍ಕುಮಾರ್ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.

ಈ ಪುಟ್ಟ ಅಭಿಮಾನಿಯ ಬಗ್ಗೆ ತಿಳಿದ ಪುನೀತ್ ಬಾಲಕನನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಮಂಗಳವಾರ ಪುನೀತ್ ಮನೆಗೆ ಬಂದ ಆದರ್ಶ್ ಮತ್ತು ಕುಟುಂಬದವರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಬಾಲಕನ ಜೊತೆ ಕೆಲ ಸಮಯ ಕಾಲ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಬಾಲಕನ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸುವ ಮೂಲಕ ಪುನೀತ್ ಮಾನವೀಯತೆ ಮೆರೆದಿದ್ದಾರೆ.


Spread the love

About Laxminews 24x7

Check Also

ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ

Spread the love ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ ಇಳಕಲ್ ಹೊರವಲಯದ ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ