Breaking News

ಚಲಿಸುತ್ತಿದ್ದ ಟ್ರೈನ್‌ನಲ್ಲಿ ಪೂಜೆ – 3 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಖಾಸಗಿ ಕೋಚ್ ಬುಕ್ ಆಗಿತ್ತು: ರೈಲ್ವೇ ಇಲಾಖೆ ಸ್ಪಷ್ಟನೆ

Spread the love

ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ. 3 ಲಕ್ಷ ರೂ.ಗೂ ಹೆಚ್ಚಿನ ಹಣ ನೀಡಿ ಖಾಸಗಿ ಕೋಚ್‌ನ್ನು ಬುಕ್ ಮಾಡಿಕೊಂಡಿದ್ದರು ಎಂದು ತಿಳಿಸಿದೆ.

ಈ ಕುರಿತು ಭಾರತೀಯ ರೈಲ್ವೆ ಉತ್ತರ ವಿಭಾಗ  ಮಾಹಿತಿ ಹಂಚಿಕೊಂಡಿದೆ. ಪೂಜೆ ನಡೆದಿರುವುದು ರೈಲಿನ ಸಾಮಾನ್ಯ ಬೋಗಿಯಲ್ಲಲ್ಲ. ಬದಲಿಗೆ ವ್ಯಕ್ತಿಯೊಬ್ಬರು 3 ಲಕ್ಷ ರೂ.ಗೂ ಅಧಿಕ ಹಣ ನೀಡಿ ಐಆರ್‌ಸಿಟಿಸಿ ವೆಬ್‌ಸೈಟ್‌ನ ವಾಣಿಜ್ಯ ಬುಕ್ಕಿಂಗ್ ವ್ಯವಸ್ಥೆಯ ಮೂಲಕ ಐಷಾರಾಮಿ ಕೋಚ್‌ನ್ನು ಬುಕ್ ಮಾಡಿದ್ದರು. ಅದರಂತೆ ಆ ಬೋಗಿಯನ್ನು ರೈಲಿಗೆ ಜೋಡಿಸಿದ್ದರು. ಹಾಗಾಗಿ ಆ ಬೋಗಿಯಲ್ಲಿ ಕಾರ್ಯಕ್ರಮ ನಡೆಸಿರುವುದು ಕಾನೂನುಬದ್ಧ ಎಂದು ತಿಳಿಸಿದೆ.

ಜುಲೈ 8ರಂದು ಐಆರ್‌ಸಿಟಿಸಿ ಮೂಲಕ ಐಷಾರಾಮಿ ಕೋಚ್‌ನ್ನು ಬುಕ್ ಮಾಡಲಾಗಿದೆ. ಅಲ್ಲದೇ ಬುಕ್ ಮಾಡಿದವರು 3,08,580 ರೂ. ಮುಂಗಡ ಪಾವತಿ ಮಾಡಿದ್ದಾರೆ. ಹೀಗಾಗಿ ಜುಲೈ 10ರಂದು ನವದೆಹಲಿಯಿಂದ ಮುಂಬೈಗೆ ಏಕಮುಖ ಪ್ರಯಾಣಕ್ಕಾಗಿ ರೈಲು ಸಂಖ್ಯೆ 12926 ಪಶ್ಚಿಮ್ ಎಕ್ಸ್ಪ್ರೆಸ್‌ಗೆ ಈ ಐಷಾರಾಮಿ ಕೋಚ್ ಜೋಡಿಸಲಾಗಿತ್ತು. ಇದರಿಂದ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದೆ.

ಸಲೂನ್ ಕೋಚ್ ಎಂದರೇನು?
ಈ ಬೋಗಿಯು ಸಾಮಾನ್ಯ ರೈಲಿನ ಬೋಗಿಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಇದರಲ್ಲಿ ಸುಸಜ್ಜಿತವಾದ ಲಿವಿಂಗ್ ರೂಮ್, ಎರಡು ಬೆಡ್‌ರೂಮ್‌ಗಳು, ಬಾತ್‌ರೂಮ್‌ಗಳು, ಅಡುಗೆ ಕೋಣೆ ಮತ್ತು ಡೈನಿಂಗ್ ಟೇಬಲ್ ಇರುತ್ತವೆ. ಇದು ಹೋಟೆಲ್ ರೂಮ್ ಅಥವಾ ಒಂದು ಚಿಕ್ಕ ಮನೆಯಂತೆ ಇದ್ದು, ವಿಶೇಷ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ಸೌಕರ್ಯವನ್ನು ನೀಡುತ್ತದೆ.

ಬ್ರಿಟಿಷರ ಕಾಲದಲ್ಲಿ ಮತ್ತು ಸ್ವಾತಂತ್ರ‍್ಯದ ನಂತರ ಇವುಗಳನ್ನು ಕೇವಲ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ರೈಲ್ವೆಯ ಉನ್ನತ ಅಧಿಕಾರಿಗಳ ಅಧಿಕೃತ ಪ್ರಯಾಣಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಈಗ ಭಾರತೀಯ ರೈಲ್ವೆ ಸಾಮಾನ್ಯ ಜನರಿಗೂ ಇದನ್ನು ಬಾಡಿಗೆಗೆ ನೀಡುತ್ತಿದೆ. ಮದುವೆ, ಪ್ರವಾಸ ಅಥವಾ ವಿಶೇಷ ಸಮಾರಂಭಗಳಿಗಾಗಿ ಶ್ರೀಮಂತರು ಅಥವಾ ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಇಡೀ ಬೋಗಿಯನ್ನೇ ಬಾಡಿಗೆಗೆ ಪಡೆಯಬಹುದು.

ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಚಲಿಸುವ ರೈಲಿನೊಳಗೆ ಒಬ್ಬ ಪಾದ್ರಿ ಮತ್ತು ಭಕ್ತರ ಗುಂಪು ಪೂಜೆ ಮಾಡುತ್ತಿದ್ದರು. ಅವರು ಬಿಳಿ ಬಟ್ಟೆ ಧರಿಸಿ ಕೋಚ್ ಒಳಗೆ ಪೂಜೆಯನ್ನು ನಡೆಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಜನರು, ರೈಲಿನಲ್ಲಿ ಈ ಕಾರ್ಯಕ್ರಮ ಮಾಡಲು ಪರ್ಮಿಷನ್ ಕೊಟ್ಟಿದ್ದು ಯಾರು? ಈ ರೀತಿ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿದ್ಯಾ ಎಂದು ಪ್ರಶ್ನಿಸಿದ್ದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ