Breaking News
Home / ಜಿಲ್ಲೆ / ಸಂಪುಟ ವಿಸ್ತರಣೆ ಅಷ್ಟು ಸುಲಭ ವಿಚಾರವಲ್ಲ, 17 ಜನರಿಗೆ ಕೊಟ್ಟ ಮಾತಿನಂತೆ ಸ್ಥಾನ ನೀಡಬೇಕಾಗುತ್ತದೆ:ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದೆ

ಸಂಪುಟ ವಿಸ್ತರಣೆ ಅಷ್ಟು ಸುಲಭ ವಿಚಾರವಲ್ಲ, 17 ಜನರಿಗೆ ಕೊಟ್ಟ ಮಾತಿನಂತೆ ಸ್ಥಾನ ನೀಡಬೇಕಾಗುತ್ತದೆ:ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದೆ

Spread the love

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಸ್ಪೋಟಗೊಳ್ಳಲಿದೆ ಎಂದು ಮಾಜಿ ಸಚಿವ ಸತೀಶ್​​​​ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಸತೀಶ್​​ ಜಾರಕಿಹೊಳಿ, ಪ್ರಸ್ತುತ ಸಂಪುಟ ವಿಸ್ತರಣೆ ಅಷ್ಟು ಸುಲಭ ವಿಚಾರವಲ್ಲ, 17 ಜನರಿಗೆ ಕೊಟ್ಟ ಮಾತಿನಂತೆ ಸ್ಥಾನ ನೀಡಬೇಕಾಗುತ್ತದೆ. ಆಗ ಮೂಲ ಬಿಜೆಪಿಯವರಿಗೆ ನಿರಾಸೆಯಾಗಲಿದೆ. ಅವರಿಗೆ ತಮ್ಮನ್ನು ಬಿಟ್ಟು ವಲಸಿಗರಿಗೆ ಆದ್ಯತೆ ನೀಡಿದ್ದಾರೆ ಎಂದು ಅಸಮಾಧಾನವುಂಟಾಗುವುದು ಸಹಜ. ಹಾಗಾಗಿ ಯಾರಿಗೆ ಮಂತ್ರಿ ಸ್ಥಾನ ನೀಡಿದರೂ ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಸಹಜವಾಗಿ ಸ್ಪೋಟವಾಗಲಿದೆ ಎಂದರು.

ಗೋಕಾಕ್ ಶಾಸಕ ರಮೇಶ್​​ ಜಾರಕಿಹೊಳಿಯೋರ್ವ ಒಬ್ಬ ಟ್ರಬಲ್ ಮೇಕರ್. ಅವನನ್ನು ಸಿಎಂ ಯಡಿಯೂರಪ್ಪ ಹೇಗೆ ಸಹಿಸಿಕೊಳ್ಳಲಿದ್ಧಾರೋ ನೋಡಬೇಕಿದೆ. ರಮೇಶ್​​ ಜಾರಕಿಹೊಳಿ ತುಂಬ ತೊಂದರೆ ನೀಡುತ್ತಾನೆ. ಅವನು ಯಾವುದೇ ಖಾತೆ ಕೇಳಿದರೂ ಸ್ವಹಿತಾಸಕ್ತಿ ಇರುತ್ತದೆಯೇ ಹೊರತು ಅಭಿವೃದ್ಧಿ ಉದ್ದೇಶವಂತೂ ಇಲ್ಲ. ಮೊದಲಿಂದಲೂ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದರು. ಈಗ ಅದು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ ಮೇಲೆ ರಮೇಶ್​​ ತಮ್ಮ ವರಸೆಯನ್ನು ಬದಲಾಯಿಸಿಕೊಂಡಿದ್ದಾರೆ. ಆತನಿಖೆ ಸಚಿವ ಸ್ಥಾನ ನೀಡಿಲ್ಲವೆಂದರೆ ಕಾಂಗ್ರೆಸ್ ಗೆ ತೊಂದರೆಮಾಡಿದಂತೆ ಬಿಜೆಪಿಯಾಲ್ಲಿಯೂ ಮಾಡಲಿದ್ದಾನೆ ಎಂದು ಹೇಳಿದರು.


Spread the love

About Laxminews 24x7

Check Also

ಸಾರ್ವಜನಿಕ ಆಸ್ತಿ ಮಾರಿದ್ದೇ ಮೋದಿ ಸಾಧನೆ: ಖರ್ಗೆ ಟೀಕೆ

Spread the love ನವದೆಹಲಿ: ‘ದೇಶದಲ್ಲಿನ ಸಾರ್ವಜನಿಕ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಪ್ರಧಾನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ