ಪ್ರಧಾನಮಂತ್ರಿಯಾಗಿ ನಾನು ನಿಮಗೆ ಹೇಳ್ತಿಲ್ಲ. ನಿಮ್ಮ ಮನೆಯ ಸದಸ್ಯನಾಗಿ ಕೈಮುಗಿದು ಕೇಳ್ತಿದ್ದಿನಿ. ಇಂದು ರಾತ್ರಿ 12 ಗಂಟೆಯಿಂದ 21 ದಿನ ಮನೆಯಲ್ಲೇ ಇರಿ ಎಂದು ಪ್ರಧಾನ ಮಂತ್ರಿ ನರೇಂದ ಮೋದಿ ಜನರಲ್ಲಿ ವಿನಂತಿಸಿಕೊಂಡ್ರು. ನಿಮ್ಮ ಕುಟುಂಬಗಳನ್ನ ಕಾಪಾಡಲು ನನಗೆ ಇರುವ ಒಂದೇ ಒಂದು ಮಾರ್ಗವಿದು. ನಿಮ್ಮ ಮನೆಯವರಿಗಾಗಿ, ನಿಮ್ಮ ಕುಟುಂಬ ಕಾಪಾಡಿಕೊಳ್ಳುವುದಕ್ಕಾಗಿಯಾದ್ರು ಮನೆಯಲ್ಲೇ ಇರಿ. ಕೊರೊನಾ ಎಂಬ ಮಹಾಪಿಡುಗನ್ನ ತೊಲಗಿಸಲು ಸಹಕರಿಸಿ ಎಂದು ಪದೇ ಪದೇ ಮೋದಿ ದೇಶದ ಜನತೆಗೆ ಕೈ ಮೈಮುಗಿದು ವಿನಂತಿಸಿಕೊಂಡ್ರು
