ಗೋಕಾಕ: ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಗೋಕಾಕ ಗ್ರಾಮ ದೇವತೆ ಜಾತ್ರೆಯನ್ನು ಕೊರೋನಾ ಸೊಂಕು ಮತ್ತು ಇತರೆ ಕಾರಣಗಳಿಂದ ಜಾರಕಿಹೊಳಿ ಸಹೋದರರ ಮಾರ್ಗದರ್ಶನದಂತೆ ಎರಡು ವರ್ಷಗಳ ಕಾಲ ಮುಂದೂಡಲಾಗಿದೆ ಎಂದು ಜಾತ್ರಾ ಕಮಿಟಿ ಪ್ರಕಟಿಸಿದೆ
ಇಲ್ಲಿನ ಎನ್ ಎಸ್ ಎಪ್ ಅತಿಥಿ ಗೃಹದಲ್ಲಿ ಜಾತ್ರೆ ಕಮಿಟಿ ಸದಸ್ಯರಾದ ಸಿದ್ಧಲಿಂಗ ದಳವಾಯಿ ಮತ್ತು ಎಸ್.ಎ.ಕೋತವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜೂನ 22 ರಿಂದ ನಡಯಬೇಕಾಗಿದ್ದ ಜಾತ್ರೆಯನ್ನು ಕೊರೋನಾ ಮಾರಣಾಂತಿಕ ವೈರಸ್ ನಿಂದಾಗಿ ಎರಡು ವರ್ಷಗಳ ಕಾಲ ಮುಂದೂಡಲು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.