ಬೆಳಗಾವಿ: ದೀಪಾವಳಿಯ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ದಿ. ಪುಂಡಲಿಕ ರಾಮಚಂದ್ರ ಹಂಗಿರಗೆಕರ ಫೌಂಡೇಶನ್ ಹಾಗೂ ಶ್ರೀ ರಾಮ್ ಇನೋವೇಶನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸ್ವಚ್ಛತಾ ಕಾರ್ಮಿಕರಿಗೆ ದೀಪಾವಳಿ ಉಡುಗೊರೆ ಹ್ಯಾಂಪರ್ಗಳನ್ನು ವಿತರಿಸಲಾಯಿತು. ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಹಗಲಿರುಳು ಶ್ರಮಿಸುವ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಗೌರವಿಸಿ, ಅವರ ಕಾರ್ಯದ ಬಗ್ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ದೀಪಾವಳಿ ಉಡುಗೊರೆ …
Read More »ಆಸ್ತಿ ಮಾರ್ಗಸೂಚಿ ಮೌಲ್ಯ ಶೇ. 40ರಷ್ಟು ಹೆಚ್ಚಳಕ್ಕೆ ಕ್ರೆಡಾಯ್ ಆಕ್ಷೇಪ
ಬೆಳಗಾವಿ: ನಗರದ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಶೇ. 40ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಬೆಳಗಾವಿ ಕ್ರೆಡಾಯ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಾಸ್ತವಿಕ ಮಾರುಕಟ್ಟೆ ಪರಿಸ್ಥಿತಿಯನ್ನು ಪರಿಶೀಲಿಸದೆ ಹಾಗೂ ಸಂಬಂಧಪಟ್ಟವರೊಂದಿಗೆ ಸಮರ್ಪಕ ಚರ್ಚೆ ನಡೆಸದೆ ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಸಂಘಟನೆ ಆಕ್ಷೇಪಿಸಿದೆ. ಆಸ್ತಿ ಮಾರ್ಗಸೂಚಿ ಮೌಲ್ಯ ಪರಿಷ್ಕರಣೆ ಸಂಬಂಧ ಕ್ರೆಡಾಯ್ ಸದಸ್ಯರು ತಹಸೀಲ್ದಾರ್ ಹಾಗೂ ಉಪನೋಂದಣಾಧಿಕಾರಿಗಳೊಂದಿಗೆ ಸಭೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈ ವೇಳೆ ಪ್ರಸ್ತಾವಿತ ಶೇ. 40ರಷ್ಟು …
Read More »ಕಬ್ಬು ಬೆಳೆಗಾರರ ಹೋರಾಟಕ್ಕೆ ಮೊದಲ ಹಂತದ ಜಯ; ಗುರ್ಲಾಪುರದಲ್ಲಿ ರೈತರ ಸಂಭ್ರಮಾಚರಣೆ
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಸತತ 12 ದಿನಗಳ ಕಾಲ ನಡೆದ ರೈತರ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ವಿಜಯೋತ್ಸವ ಆಚರಿಸಿದರು. ಹೋರಾಟದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚುವ ಮೂಲಕ ರೈತರು ಸಂಭ್ರಮಿಸಿದರು. ಈ ವೇಳೆ ರೈತ ಪರ ಘೋಷಣೆಗಳು ಮೊಳಗಿದವು. ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ …
Read More »ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಡಿಕೆಶಿಯೇ ಮುಖ್ಯಮಂತ್ರಿ*: *ಸತೀಶ್ ಜಾರಕಿಹೊಳಿ ಸ್ಪಷ್ಟನೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆಯಾಗುವ ಪ್ರಶ್ನೆಯೇ ಇಲ್ಲ. ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದೆ. ಹೀಗಾಗಿ ಮತ್ತೊಮ್ಮೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷ ಯಾರಿಗೂ ಪಕ್ಷಕ್ಕಿಂತ ಹೆಚ್ಚಿನದನ್ನು ನೀಡಲು ಸಾಧ್ಯವಿಲ್ಲ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ತಾವು ಮುಖ್ಯಮಂತ್ರಿಯಾಗದಿದ್ದರೂ …
Read More »ಡಿ.2 ರಿಂದ 11 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಬೆಂಗಳೂರು: ಡಿಸೆಂಬರ್ 2 ರಿಂದ 11 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನ ಕುರಿತು ವಿಧಾನಸಭೆ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. 9 ದಿನಗಳ ಕಾಲ ನಡೆಯಲಿದ್ದು, ಶನಿವಾರವೂ ಕಲಾಪ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ನ.30 ರಿಂದ ಡಿ.11 ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಸಲು ನಿಶ್ಚಿಯಿಸಲಾಗಿತ್ತು. ಆದರೆ, ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆ ಅಧಿವೇಶನ ದಿನಾಂಕದಲ್ಲಿ ಬದಲಾವಣೆಯಾಗಿದೆ. ಡಿ.2 ರಿಂದ …
Read More »ಮಾಲೂರು ಶಾಸಕ ಕೆ.ವೈ.ನಂಜೇಗೌಡಗೆ ಬಿಗ್ ರಿಲೀಫ್
ಕೋಲಾರ: ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡಗೆ ಧಾರವಾಡ ವಿಭಾಗೀಯ ಪೀಠ ಬಿಗ್ ರಿಲೀಫ್ ಕೊಟ್ಟಿದೆ. ಭ್ರಷ್ಟಾಚಾರ ಸಂಬಂಧ ಇ.ಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಹೈಕೋರ್ಟ್ನಿಂದ ಶಾಸಕ ನಂಜೇಗೌಡರಿಗೆ ರಿಲೀಫ್ ಸಿಕ್ಕಿದೆ. ನ್ಯಾಯಾಧೀಶರಾದ ಎಂ.ಐ ಅರುಣ್ ಅವರಿಂದ ಆದೇಶ ಹೊರಬಿದ್ದಿದ್ದು, ಇ.ಡಿಯಲ್ಲಿ ದಾಖಲಾಗಿದ್ದ ಅರ್ಜಿ ವಿರುದ್ಧ ಧಾರವಾಡ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಮಾಲೂರು ಶಾಸಕ ನಂಜೇಗೌಡ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. PCR ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದ ಇಡಿ …
Read More »ಬಸ್ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ದಾವಣಗೆರೆ: ನಗರಕ್ಕೆ ಬರುತ್ತಿದ್ದ KSRTC ಬಸ್ಸಿನಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಚಾಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಚಿತ್ರದುರ್ಗದಿಂದ ದಾವಣಗೆರೆಗೆ ಬರುವಾಗ ಬಸ್ನಲ್ಲಿ ಮಹಿಳೆಯೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು. ಬ್ಯಾಗ್ನಲ್ಲಿ ಚಿನ್ನದ ಆಭರಣ ಇರುವುದನ್ನ ಕಂಡ ಚಾಲಕ ಮಂಜುನಾಥ್, ಡಿಪೋ ಮ್ಯಾನೇಜರ್ ಸಿದ್ದೇಶ್ ಸಿದ್ದನಮಠ ಅವರಿಗೆ ಹಸ್ತಾಂತರಿಸಿದ್ದರು. ಬಳಿಕ ಬ್ಯಾಗ್ ಪರಿಶೀಲನೆ ನಡೆಸಿದಾಗ ಒಂದು ಮಾಂಗಲ್ಯ ಸರ, ಎರಡು ಕಿವಿಯೋಲೆ ಹಾಗೂ ಮೊಬೈಲ್ ನಂಬರ್ …
Read More »ಒಬ್ಬ ಆಟಗಾರನಿಗೆ 40 ಕೋಟಿ ಡಿಮ್ಯಾಂಡ್ – ಐಪಿಎಲ್ನ ಸ್ಟಾರ್ ಆಟಗಾರರಿಂದ ಫ್ರಾಂಚೈಸಿಗಳಿಗೆ ಬಿಗ್ ಶಾಕ್?
ಮುಂಬೈ: ಮುಂಬರುವ ಐಪಿಎಲ್ ಮೆಗಾ ಹರಾಜಿಗೂಮುನ್ನ ಆಟಗಾರರ ರಿಟೆನ್ಷನ್ವಿಚಾರವಾಗಿ ಫ್ರಾಂಚೈಸಿಗಳ ನಡುವೆ ದುಬಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಎದುರಾಗಿದೆ. ಐಪಿಎಲ್ನ ಕೆಲವು ಸ್ಟಾರ್ ಆಟಗಾರರು ತಮ್ಮನ್ನ ತಂಡದಲ್ಲೇ ಉಳಿಸಿಕೊಳ್ಳಲು ಬರೋಬ್ಬರಿ 40 ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಈ ಅಸಾಧಾರಣ ಮೊತ್ತದ ಬೇಡಿಕೆ ಫ್ರಾಂಚೈಸಿಗಳ (Franchises) ತಂಡದ ಸಂಯೋಜನೆ ಹಾಗೂ ಆಟಗಾರರ ಖರೀದಿ ತಂತ್ರಗಾರಿಕೆಯನ್ನೇ ಬದಲಿಸುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಕನಿಷ್ಠ ಇಬ್ಬರು ಪ್ರಮುಖ ಆಟಗಾರರು …
Read More »ಉತ್ತರಾಖಂಡ್ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪ್ಗೌಡ ತಂದೆ ಸಾವು
ಹಾಸನ: ಉತ್ತರಾಖಂಡ್ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ಉದ್ಯಮಿ ಪ್ರತಾಪ್ಗೌಡ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪ್ರತಾಪ್ಗೌಡ ಅವರ ತಂದೆ ಸಹ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಿಂಗರಾಜು (84) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಜೋಡಿ ಕೃಷ್ಣಾಪುರದಲ್ಲಿ ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ನಂತರ ದಿನಗಳಲ್ಲಿ ಸಕಲೇಶಪುರದ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ನಿಂಗರಾಜು ಅವರ ಪುತ್ರ ಪ್ರತಾಪ್ಗೌಡ ಅವರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನಂತರ ಉದ್ಯಮಿಯಾಗಿದ್ದರು. …
Read More »ಮಗನ MBBS ಫೀಸ್ ಕಟ್ಟಲು, ಮಗಳನ್ನ ವಿದೇಶಕ್ಕೆ ಕಳುಹಿಸಿಸಲು ಗೃಹಲಕ್ಷ್ಮಿ ನೆರವಾಯಿತು: ಯಶೋಗಾಥೆ ತೆರೆದಿಟ್ಟ ಮಹಿಳೆಯರು
ಬೆಂಗಳೂರು: ʻನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರದಷ್ಟು ಫೀಸ್ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನ ನೋಡಿಕೊಂಡು ಬರಲು ಅನುಕೂಲವಾಗಿದೆʼ ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಭಾವುಕತೆಯಲ್ಲಿ ಮಿಂದೆದ್ದಿತು. ʻನಿಮ್ಮ ಮಗ ಎಷ್ಟು ಮಾರ್ಕ್ಸ್ ತಗೊಂಡಿದಾನೆ ತಾಯಿʼ ಎಂದು ಸಿಎಂ ಕೇಳಿದಾಗ, ʻಮಗ ಪಿಯುಸಿಯಲ್ಲಿ 98% ತಗೊಂಡಿದ್ದಾನೆʼ ಎಂದು ಹೇಳುವಾಗ ತಾಯಿಯ ಹುಮ್ಮಸ್ಸು ಇಮ್ಮಡಿಯಾಗಿತ್ತು. ಹೌದು, …
Read More »
Laxmi News 24×7