ಹಾಸನ: ಉತ್ತರಾಖಂಡ್ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ಉದ್ಯಮಿ ಪ್ರತಾಪ್‌ಗೌಡ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪ್ರತಾಪ್‌ಗೌಡ ಅವರ ತಂದೆ ಸಹ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ನಿಂಗರಾಜು (84) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಜೋಡಿ ಕೃಷ್ಣಾಪುರದಲ್ಲಿ ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ನಂತರ ದಿನಗಳಲ್ಲಿ ಸಕಲೇಶಪುರದ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.
ನಿಂಗರಾಜು ಅವರ ಪುತ್ರ ಪ್ರತಾಪ್‌ಗೌಡ ಅವರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನಂತರ ಉದ್ಯಮಿಯಾಗಿದ್ದರು. ಇತ್ತೀಚೆಗೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಅವರು ಸಾವನ್ನಪ್ಪಿದ್ದರು. ಈ ವಿಚಾರವನ್ನು ತೀವ್ರ ಅನಾರೋಗ್ಯದಲ್ಲಿದ್ದ ನಿಂಗರಾಜು ಅವರಿಗೂ ಕುಟುಂಬಸ್ಥರು ತಿಳಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು (ನ.6) ಬಾಚಿಹಳ್ಳಿ ಗ್ರಾಮದಲ್ಲಿ ನೆರವೇರಿದೆ.
Laxmi News 24×7