Breaking News

ಮಾಲೂರು ಶಾಸಕ ಕೆ.ವೈ.ನಂಜೇಗೌಡಗೆ ಬಿಗ್ ರಿಲೀಫ್

Spread the love

ಕೋಲಾರ: ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡಗೆ ಧಾರವಾಡ ವಿಭಾಗೀಯ ಪೀಠ ಬಿಗ್ ರಿಲೀಫ್ ಕೊಟ್ಟಿದೆ.

ಭ್ರಷ್ಟಾಚಾರ ಸಂಬಂಧ ಇ.ಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಶಾಸಕ ನಂಜೇಗೌಡರಿಗೆ ರಿಲೀಫ್ ಸಿಕ್ಕಿದೆ. ನ್ಯಾಯಾಧೀಶರಾದ ಎಂ.ಐ ಅರುಣ್ ಅವರಿಂದ ಆದೇಶ ಹೊರಬಿದ್ದಿದ್ದು, ಇ.ಡಿಯಲ್ಲಿ ದಾಖಲಾಗಿದ್ದ ಅರ್ಜಿ ವಿರುದ್ಧ ಧಾರವಾಡ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಮಾಲೂರು ಶಾಸಕ ನಂಜೇಗೌಡ ಸಲ್ಲಿಸಿದ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ. PCR ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದರು.

ಕೋಮುಲ್ ನೇಮಕಾತಿ ವಿಚಾರದಲ್ಲಿ 2024 ಜನವರಿ 20 ರಲ್ಲಿ ಶಾಸಕ ನಂಜೇಗೌಡ ಮನೆ ಮೇಲೆ ED ದಾಳಿಯಾಗಿತ್ತು. ಮಾಲೂರು ತಾಲೂಕಿನಲ್ಲಿ ಕೊಮ್ಮನಹಳ್ಳಿ ನಿವಾಸ ಹಾಗೂ ಇತರೆಡೆ ED ಅಧಿಕಾರಿಗಳು ದಾಳಿ ನಡೆಸಿದ್ದರು. ಅದೇ ವರ್ಷ ಸೆ.12 ರಂದು PCR ಅಡಿಯಲ್ಲಿ ಇ.ಡಿ ಅಧಿಕಾರಿಗಳು ಕೇಸ್ ದಾಖಲು ಮಾಡಿಕೊಂಡಿದ್ದರು. ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಕೇಸ್ ದಾಖಲು ಮಾಡಿದ್ದ ED ವಿಚಾರಣೆ ನಡೆಸಿ ತೀರ್ಪು ನೀಡಿದೆ.

ಇ.ಡಿ ದಾಳಿ ವೇಳೆ ನಂಜೇಗೌಡ ಕುಟುಂಬಕ್ಕೆ ಸೇರಿದ್ದ ಜಮೀನು ಆಸ್ತಿ, ನಗದು ಹಾಗೂ ಮೊಬೈಲ್‌ಗಳನ್ನು ಸೀಜ್ ಮಾಡಲಾಗಿತ್ತು. ನೇಮಕಾತಿ ವಿಚಾರದಲ್ಲಿ ED ವಿಚಾರಣೆ ಮಾಡಲು ಅವಕಾಶವಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಶಾಸಕ ನಂಜೇಗೌಡರಿಗೆ ಮೊದಲ ರಿಲೀಫ್ ಸಿಕ್ಕಿದೆ.

ಶಾಸಕ ನಂಜೇಗೌಡ ಪರ ವಕೀಲರಾದ ಮಹೇಂದ್ರ ಗೌಡ ವಾದ ಮಂಡನೆ ಮಾಡಿದರು. ಅದರಂತೆ ನಂಜೇಗೌಡ ನೇಮಕಾತಿ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂದು ಕೋರ್ಟ್‌ ಆದೇಶ ನೀಡಿದೆ. ಸದ್ಯ ED ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಡಿ.2 ರಿಂದ 11 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Spread the loveಬೆಂಗಳೂರು: ಡಿಸೆಂಬರ್ 2 ರಿಂದ 11 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನ ಕುರಿತು ವಿಧಾನಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ