ಬೆಳಗಾವಿ: ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಸೈಬರ್ ಅಪರಾಧಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳಿಂದ ವಯೋ ವೃದ್ಧರವರೆಗೆ, ವಿಶೇಷವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಸದ್ಯದ ಪರಿಸ್ಥಿತಿಗೆ ಅನಿವಾರ್ಯವಾಗಿದೆ ಎಂದು ಇಂಗ್ಲೆಂಡ್ ನ ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಿತೀಶ್ ಸಕ್ಸೇನಾ ತಿಳಿ ಹೇಳಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ, ಅಪರಾಧಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗ ಆಯೋಜಿಸಿದ್ದ ಸೈಬರ್ ಸೇಫ್: ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಆನ್ಲೈನ್ ಅಪರಾಧಗಳನ್ನು ನಿಭಾಯಿಸುವ …
Read More »ನರ್ಸಿಂಗ್ ಸಿಬ್ಬಂದಿ ನಿರಂತರ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು: ಕರ್ನಲ್ ಎಂ ದಯಾನಂದ
ಬೆಳಗಾವಿ: ನರ್ಸಿಂಗ ಸಿಬ್ಬಂದಿಗಳು ನಿರಂತರವಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ವೈದ್ಯಕೀಯ ಹೊಸ ತಂತ್ರಜ್ಞಾನ, ಸಾಧನಗಳು ವಿಧಾನಗಳನ್ನು ಕಲಿಯಬೇಕು. ಕೇವಲ ಸಾಮಾನ್ಯ ಕರ್ತವ್ಯಗಳನ್ನು ಮಾಡುವುದರಿಂದ ಸಾಕಾಗುವುದಿಲ್ಲ. ಉತ್ತಮ ಸಂವಹನ ಕೌಶಲ್ಯ, ರೋಗಿಗಳೊಂದಿಗೆ ಸಹಾನುಭೂತಿ, ಕಾರ್ಯನಿಷ್ಠೆಯಿಂದ ಸೇವೆ ಸಲ್ಲಿಸುವದೇ ಉತ್ತಮ ನರ್ಸ್‌ನ ಗುರುತು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಹೇಳಿದರು. ಅಂತರಾಷ್ಟ್ರೀಯ ನರ್ಸಿಂಗ ದಿನಾಚರಣೆ …
Read More »ಬೆಳಗಾವಿ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಬಂಧನ
ಕಾನೂನು ಬಾಹಿರವಾಗಿ ಸಾರ್ವಜನಿಕರ ಹಣ ಸಂಗ್ರಹಿಸಿರುವ ಆರೋಪ ಹೊತ್ತಿರುವ ಬೆಳಗಾವಿ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಲಾಗಿದೆ. ಶಿವಾನಂದ ಅವರ ಮನೆ, ಕಚೇರಿ ಹಾಗೂ ವಿವಿಧ ಸ್ಥಳಗಳ ಮೇಲೆ ಗುರುವಾರ ದಾಳಿ ಆರಂಭಿಸಲಾಗಿತ್ತು. ಶುಕ್ರವಾರ ಕೂಡ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಯಿತು. ಮಧ್ಯಾಹ್ನ ಶಿವಾನಂದ ಅವರನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ, ರಾತ್ರಿ ಪ್ರಕರಣ ದಾಖಲಿಸಿ, ಬಳಿಕ ಶಿವಬಸವ ನಗರದ ಮನೆಯಿಂದ …
Read More »ಪದವಿ ಕಾಲೇಜ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
ಕೌಜಲಗಿ: ಪದವಿ ಕಾಲೇಜು ಆರಂಭ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಕೌಜಲಗಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು. ಗ್ರಾಮದಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಗೋಕಾಕ ಸೇರಿದಂತೆ ವಿವಿಧ ನಗರಗಳಿಗೆ ತೆರಳಬೇಕು. ಹೀಗಾಗಿ, ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸಬೇಕು. ಗ್ರಾಮದಲ್ಲಿ ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ ನಿರ್ಮಾಣ ಹಾಗೂ …
Read More »ಕಾಲುವೆಗಳಿಗೆ ನೀರು ಹರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ
ಗೋಕಾಕ: ಸಾರ್ವಜನಿಕರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ಲ ಜಲಾಶಯದಿಂದ ಮೂರು ಕಾಲುವೆಗಳಿಗೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು. ಇಲ್ಲಿನ ಎನ್ಎಸ್ಎ್ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಬೇಸಿಗೆಯ ಹಾಹಾಕಾರ ತಪ್ಪಿಸಲು ಟಪ್ರಭಾ ಎಡದಂಡೆ, ಟಪ್ರಭಾ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರು ಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ …
Read More »ಹೆಣ್ಣಿಗೆ ಸಿಗಬೇಕಿದ್ದ ಗೌರವ ಇನ್ನೂ ಸಿಗುತ್ತಿಲ್ಲ: ಉಮಾಶ್ರೀ
ಬೆಳಗಾವಿ: ಹೆಣ್ಣನ್ನು ಭೋಗದ ವಸ್ತು, ಸೌಂದರ್ಯದ ವಸ್ತುವಾಗಿ ಕಾಣುವ ಸಮಾಜದಿಂದ ಹೊರಬಂದು , ಅವಳು ನಮ್ಮ ಮನೆಯ ಹೆಣ್ಣುಮಗಳು ಎಂದು ನೋಡಬೇಕು. ಇಂದಿಗೂ ನಾವು ಅವಳಿಗೆ ಆತ್ಮರಕ್ಷಣೆಯ ಪಾಠ ಹೇಳುತ್ತಿದ್ದೇವೆಂದರೆ ಎಂಥ ಸಮಾಜದಲ್ಲಿ ಬದುಕುತ್ತಿದ್ದೇವೆಂದು ವ್ಯಥೆಯಾಗುತ್ತದೆ ಎಂದು ಹಿರಿಯ ನಟಿ ಉಮಾಶ್ರೀ ಕಳವಳ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ, …
Read More »ನಾಲ್ಕು ತಿಂಗಳಿನಿಂದ ಬಾಕಿ ಉಳಿದಿದ್ದ ನರೇಗಾ ಬಾಕಿ ಕೂಲಿ ಬಿಡುಗಡೆ
ಬೆಳಗಾವಿ :ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಆಡಳಿತಾತ್ಮಕ ಹಾಗೂ ಆರ್ಥಿಕ ಸಂಘರ್ಷ, ವಿಬಿಜಿ ರಾಮ್‌ಜಿ ಯೋಜನೆ ಅನುಷ್ಠಾನ ಆಗದಿರುವುದು ಹೀಗೆ ವಿವಿಧ ಕಾರಣಗಳಿಂದ ನಾಲ್ಕು ತಿಂಗಳಿನಿಂದ ಬಾಕಿ ಉಳಿದಿದ್ದ ನರೇಗಾ ಬಾಕಿ ಕೂಲಿ ಗುರುವಾರ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಬಾಕಿ ಇದ್ದ ಕೂಲಿ ಮೊತ್ತ 27.39 ಕೋಟಿ ರೂ. ಮೇ 14ರಂದು ಪೈಕಿ 17.98 ಕೋಟಿ ರೂ. ಸಂಬಂಧಪಟ್ಟ ಕೂಲಿಕಾರರ ಖಾತೆಗೆ ಜಮೆಯಾಗಿದೆ. 9.41 ಕೋಟಿ ಬಾಕಿ …
Read More »ಬೆಳಗಾವಿ ಮಹಾನಗರ ಪಾಲಿಕೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು
ಬೆಳಗಾವಿ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕಿರುವ ಬೆಳಗಾವಿ ಮಹಾನಗರ ಪಾಲಿಕೆ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಲು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ನಗರ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ’ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯ ಕೈಗೊಳ್ಳುವ ಬದಲು ರಾಜ್ಯ ಸರ್ಕಾರ ಅಭಿಪ್ರಾಯ ಪಡೆದುಕೊಳ್ಳುವುದಾಗಿ ಠರಾವು ಕೈಗೊಳ್ಳುವ ಮೂಲಕ …
Read More »ಸಾಕಾನೆ ಬಳಸಿ ಕಾಡುಕೋಣಗಳ ಶಿಫ್ಟ್ – ಇದು ದಕ್ಷಿಣ ಭಾರತದಲ್ಲೇ ಮೊದಲು
ಚಿಕ್ಕಮಗಳೂರು: ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮಲೆನಾಡಿಗರು ಆತಂಕದಲ್ಲಿ ಬದುಕುವಂತಾಗಿದೆ. ಈಗಾಗಲೇ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈಗ ಕಾಡುಕೋಣಗಳ ಭಯಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. ಮಲೆನಾಡು ಭಾಗದಲ್ಲಿ ಕಾಡುಕೋಣಗಳು ನಿರಂತರವಾಗಿ ಬೆಳೆ ನಾಶಪಡಿಸುವುದು ಮಾತ್ರವಲ್ಲದೇ, ಕೃಷಿಕರು ಮತ್ತು ಸಾರ್ವಜನಿಕರ ಮೇಲೂ ದಾಳಿ ಮಾಡುತ್ತಿದ್ದವು. ಇದೀಗ, ಸರ್ಕಾರ ಮತ್ತು ಅರಣ್ಯ ಇಲಾಖೆ ಅಪಾಯಕಾರಿ ಕಾಡುಕೋಣಗಳನ್ನ ಸ್ಥಳಾಂತರಿಸಲು …
Read More »ಪೆಟ್ರೋಲ್ ದರ ಏರಿಕೆ ಬೆನ್ನಲ್ಲೇ ಸಿಎನ್‌ಜಿ ದರವೂ ಏರಿಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರವನ್ನು 2 ರೂ. ಏರಿಸಲಾಗಿದೆ. ಪರಿಷ್ಕೃತ ದರ ಇಂದು ಬೆಳಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ದರ 90 ರೂ.ಗೆ ಏರಿಕೆಯಾಗಿದೆ. ವಿವಿಧ ಭಾಗಗಳಲ್ಲಿ ಅಥವಾ ವಿತರಕರ (ಗ್ಯಾಸ್ ಕಂಪನಿಗಳು) ಆಧಾರದ ಮೇಲೆ ಬೆಲೆಯಲ್ಲಿ 0.10 ರಿಂದ 1 ರವರೆಗೆ ವ್ಯತ್ಯಾಸ ಇರಲಿದೆ. ಆಟೋರಿಕ್ಷಾಗಳು, ಕ್ಯಾಬ್‌ಗಳು …
Read More »
Laxmi News 24×7