Breaking News

15 ದಿನ ಅಷ್ಟೇ ಬಾಕಿ – ಇ-ಕೆವೈಸಿ ಕೊಡದಿದ್ರೆ ರೇಷನ್‌ ಕಾರ್ಡ್‌ ರದ್ದಾಗೋದು ಗ್ಯಾರಂಟಿ

Spread the love

ಬೆಂಗಳೂರು: ರೇಷನ್ ಕಾರ್ಡ್ ಇ ಕೆವೈಸಿ ಮುಕ್ತಾಯಕ್ಕೆ ಕೇವಲ 15 ದಿನ ಅಷ್ಟೇ ಬಾಕಿ ಇದೆ. ಇ-ಕೆವೈಸಿ ಆಗದಿದ್ರೆ ರೇಷನ್ ಕಾರ್ಡ್ ರದ್ದಾಗಲಿದೆ. ಆದರೆ ಇ ಕೆವೈಸಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ಇದುವರೆಗೂ ಕೇವಲ 36.44% ಅಷ್ಟೇ ಇ ಕೆವೈಸಿ ಆಗಿದೆ. ಒಂದು ಕಡೆ ಸರ್ವರ್ ಕಾಟ ಮತ್ತೊಂದು ಕಡೆ ಡೆಡ್ ಲೈನ್ ಆತಂಕ ನಡುವೆ ಇದುವರೆಗೂ 36.44% ಅಷ್ಟೇ ಇ ಕೈವೈಸಿ ಆಗಿದೆ.

ಒಟ್ಟು 2.67 ಕೋಟಿ ರೇಷನ್ ಕಾರ್ಡ್‌ಗಳ ಇ-ಕೆವೈಸಿ ಆಗಬೇಕಿದ್ದು, ಇದುವರೆಗೂ 97.54 ಲಕ್ಷ ಅಷ್ಟೇ ಇಕೆವೈಸಿ ಆಗಿದೆ. ಇನ್ನೂ 1.70 ಕೋಟಿ ರೇಷನ್ ಕಾರ್ಡ್‌ಗಳ ಇ ಕೆವೈಸಿ ಆಗಬೇಕಿದೆ. ಒಂದು ವೇಳೆ ಇ ಕೆವೈಸಿ ಮಾಡಿಸದಿದ್ದರೆ ಕಾರ್ಡ್ ರದ್ದಾಗಲಿದೆ. ಸೆಪ್ಟೆಂಬರ್ 30 ಕೊನೆ ದಿನ ಇದ್ದು ಸಮಯ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರು ಪೂರ್ವ, ರಾಯಚೂರು, ವಿಜಯಪುರ ಹಾಗೂ ಬೆಳಗಾವಿಯಲ್ಲಿ 50% ಇ ಕೈವೈಸಿ ದಾಟಿದೆ. ಉಡುಪಿ, ಬಳ್ಳಾರಿ, ಬೀದರ್, ಶಿವನೊಗ್ಗ, ಕೊಪ್ಪಳ ಹಾಗೂ ಚಾಮರಾಜನಗರದಲ್ಲಿ ಶೇಕಾಡ 20 ರಿಂದ 25 ರಷ್ಟು ಇ ಕೈವೈಸಿ ಆಗಿದೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ