ಬೆಂಗಳೂರು: ಗ್ಯಾರಂಟಿ ಸೇರಿ ವಿವಿಧ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ SCSP-TSP ಹಣವನ್ನ ಬಳಕೆ ಮಾಡಿಕೊಳ್ಳಲಾಗಿದೆ ಅಂತ ಸಿಎಂ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಹಣ ಬೇರೆ ಇಲಾಖೆ, ಯೋಜನೆಗಳಿಗೆ ಬಳಕೆ ಮಾಡಿದ್ದೇವೆ ಅಂತ ಒಪ್ಪಿಕೊಂಡರು.
ಮುಂದುವರಿದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ ಅವರು, ಕೇಂದ್ರ ಸರ್ಕಾರವೂ ನಾವು ಮಾಡಿದಂತೆ ಕಾಯ್ದೆ ಮಾಡಿ ಹಣ ಮೀಸಲು ಇಡಲಿ. ಸುಮ್ಮನೆ ಮಾತಾಡೋದು ಬೇಡ ಅಂತ ಕಿಡಿಕಾರಿದರು.
SCSP-TSP ಹಣ ಗ್ಯಾರಂಟಿಗೆ ಬಳಕೆ ಮಾಡ್ತಾ ಇದ್ದೀರಾ ಅಂತ ವಿಪಕ್ಷಗಳು ಆರೋಪ ಮಾಡ್ತಾ ಇದ್ದವು. ಆಗ ಸಚಿವರಾಗಿದ್ದ ಮಹಾದೇವಪ್ಪ ಸೇರಿ ಸಿಎಂ ಸರ್ಕಾರದ ಮಂತ್ರಿಗಳು ಗ್ಯಾರಂಟಿ ಸೇರಿ ವಿವಿಧ ಯೋಜನೆಗೆ SCSP-TSP ಹಣ ಬಳಕೆ ಮಾಡಿಕೊಂಡಿಲ್ಲ ಅಂತ ವಾದ ಮಾಡ್ತಾ ಇದ್ದರು. ಈಗ ಖುದ್ದು ಸಿಎಂ ಅವರೇ ಒಪ್ಪಿಕೊಂಡಿರೋದು ಸರ್ಕಾರ ದಲಿತರ ಹಣ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಅನ್ನೋದು ಸತ್ಯವಾಗಿದೆ.
Laxmi News 24×7