Breaking News

ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಅರ್ಜಿ ಸಲ್ಲಿಕೆಗೆ ಹೊಸ ಆದೇಶ

Spread the love

ವಾಷಿಂಗ್ಟನ್: ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಸಂಚಲನ ಸೃಷ್ಟಿಸಿದೆ. ಖಾಯಂ ನಿವಾಸಿ ಪ್ರಮಾಣಪತ್ರ (ಗ್ರೀನ್‌ಕಾರ್ಡ್) ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ಮಾತೃದೇಶಗಳಿಗೆ ಹಿಂತಿರುಗಿ ಅಲ್ಲಿಂದಲೇ ಅಮೆರಿಕ ಕಾನ್ಸುಲೆಟ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು ಅಂತ ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗವು ಆದೇಶ ಹೊರಡಿಸಿದೆ.

ಇದರಿಂದಾಗಿ, ತಾತ್ಕಾಲಿಕ ವೀಸಾದಲ್ಲಿ ಇರುವವರು, ಅಕ್ರಮವಾಗಿ ವಾಸಿಸುತ್ತಿರುವವರು, ಗಂಡ/ಹೆAಡತಿ ಅಥವಾ ಮಕ್ಕಳ ಪ್ರಾಯೋಜಕತ್ವ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದ ಅನ್ವಯ ದೇಶ ತೊರೆಯಬೇಕಿದೆ.

ಎಚ್1ಬಿ ವೀಸಾ, ಎಲ್1 ವೀಸಾ ಹಾಗೂ ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ಹೋಗಿದ್ದವರು ಅಲ್ಲಿಯೇ ಉಳಿದುಕೊಂಡು ಗ್ರೀನ್‌ಕಾರ್ಡ್ಗೆ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಮಾತೃದೇಶಗಳಿಗೆ ತೆರಳಿ ಅಲ್ಲಿಂದ ಅರ್ಜಿ ಸಲ್ಲಿಸಬೇಕಿದೆ.


Spread the love

About Laxminews 24x7

Check Also

ಎಐಟಿಎಂನಲ್ಲಿ 14ನೇ ಪದವಿ ಪ್ರದಾನ ಹಾಗೂ ಪ್ಲೇಸ್‌ಮೆಂಟ್ ದಿನಾಚರಣೆ ಸಂಭ್ರಮ

Spread the loveಬೆಳಗಾವಿ : ಸುರೇಶ್ ಅಂಗಡಿ ಎಜುಕೇಶನ್ ಫೌಂಡೇಶನ್‌ನ ಅಧೀನದಲ್ಲಿರುವ ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ) ಸಂಸ್ಥೆಯಲ್ಲಿ ಸೋಮವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ