Breaking News

ಒಂದೇ ದಿನ 18 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 11 ಜನರನ್ನು ವೈರಾಣು ಹೊಸಕಿ ಹಾಕಿದೆ.

Spread the love

ಮುಂಬೈ, ಏ.25- ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿನ ಸಾವು ಮತ್ತು ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರ ನಂಬರ್ ಒನ್ ಹಾಟ್‍ಸ್ಪಾಟ್ ರಾಜ್ಯ ಎನಿಸಿದೆ.

ರಾಜ್ಯದ ವಿವಿಧೆಡೆ ಕೊರೊನಾ ಹೆಮ್ಮಾರಿಯ ಮರಣ ಮೃದಂಗದ ಮಾರ್ದನಿ ಮುಂದುವರಿದಿದ್ದು, ಒಂದೇ ದಿನ 18 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 11 ಜನರನ್ನು ವೈರಾಣು ಹೊಸಕಿ ಹಾಕಿದೆ.

ದೇಶದಲ್ಲಿ ಮಾರಕ ಕೋವಿಡ್-19 ಸೋಂಕಿನಿಂದ 24 ತಾಸುಗಳಲ್ಲಿ ಇಷ್ಟು ರೋಗಿಗಳು ಅಸುನೀಗಿರುವುದು ಇದೇ ಮೊದಲು. ಮಹಾರಾಷ್ಟ್ರದಲ್ಲಿ ಕಿಲ್ಲರ್ ವೈರಸ್ ಈವರೆಗೆ 301 ಜನರನ್ನು ಆಪೋಶನ ತೆಗೆದುಕೊಂಡಿದೆ.

ಮತ್ತೊಂದೆಡೆ ಸೋಂಕು ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವುದು ಕಳವಳಕಾರಿಯಾಗಿದೆ. ಒಂದೇ ದಿನ ಸುಮಾರು 400 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಪೀಡಿತರ ಸಂಖ್ಯೆ 6,817ಕ್ಕೇರಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ರಾಜ್ಯದಲ್ಲಿ 958 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ರಾಜ್ಯ ಸರ್ಕಾರದ ಆರೋಗ್ಯ ಸಚಿವಾಲಯ ಈವರೆಗೆ 1 ಲಕ್ಷಕ್ಕೂ ಹೆಚ್ಚು ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ.


Spread the love

About Laxminews 24x7

Check Also

ಉಕ್ಕಿ ಹರಿಯುತ್ತಿದೆ ವೇದಗಂಗಾ ನದಿ

Spread the love ನಿಪ್ಪಾಣಿ: ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುನ್ನರಗಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನವೇ ಪ್ರವಾಹದ ಪರಿಸ್ಥಿತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ