Breaking News

ದಕ್ಷಿಣ ಪಿನಾಕಿನಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ – ಮೃತದೇಹ ಹೊರತೆಗೆಯಲು ಬಂದ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವು

Spread the love

ಬೆಂಗಳೂರು: ದಕ್ಷಿಣ ಪಿನಾಕಿನಿ ನದಿಗೆ  ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮೃತದೇಹ ಹೊರತೆಗೆಯಲು ಬಂದ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘನಘೋರ ಘಟನೆ ಬೆಂಗಳೂರು ಹೊರವಲಯದ ಆನೇಕಲ್   ತಾಲೂಕಿನ ಮುಗಳೂರಿನಲ್ಲಿ ನಡೆದಿದೆ.

ಕವಿತಾ ಶ್ರೀನಿವಾಸ್(35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಲ್ಕುಂಟೆ ಅಗ್ರಹಾರ ಗ್ರಾಮದ ನಿವಾಸಿ ಕವಿತಾ ಕಳೆದ 14 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದು ಕವಿತಾ ದಕ್ಷಿಣ ಪಿನಾಕಿನಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸರ್ಜಾಪುರ ಪೊಲೀಸರು ಮೃತದೇಹ ಹೊರತೆಗೆಯಲು ಮಾಲೂರು ಮಂಜುನಾಥ್‌ರನ್ನ ಕರೆಸಿದ್ದರು. ಮೃತದೇಹ ಹೊರತೆಗೆಯುವಾಗ ಮಂಜುನಾಥ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೆ ಸರ್ಜಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಎದುರೇ ಮಂಜುನಾಥ್ ನೀರಿಗಿಳಿದಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಂಜುನಾಥ್ ಮೃತಪಟ್ಟಿದ್ದಾರೆ. ಯಾವುದೇ ರಕ್ಷಣಾ ಪರಿಕರಗಳಿಲ್ಲದೆ ನೀರಿಗಿಳಿಯುತ್ತಿದ್ದರೂ ಪೊಲೀಸರು ತಡೆದಿಲ್ಲ. ಮಂಜುನಾಥ್ ಸಾವಿಗೆ ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಮಂಜುನಾಥ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಮಹಿಳೆ ಆತ್ಮಹತ್ಯೆ ಪ್ರಕರಣ ಸಂಬಂಧ ಕವಿತಾ ಸಹೋದರಿ ಮುನಿರತ್ನ ಮಾತನಾಡಿದ್ದು, ಕವಿತಾ- ಶ್ರೀನಿವಾಸ್ ಮದುವೆಯಾಗಿ 15 ವರ್ಷವಾಗಿತ್ತು. ಮದುವೆ ಆದ ದಿನದಿಂದಲೂ ಗಂಡ ಕಿರುಕುಳ ನೀಡುತ್ತಿದ್ದರು. ಭಾನುವಾರವೂ ಗಂಡ-ಹೆಂಡತಿ ಮಧ್ಯೆ ಜಗಳವಾಗಿದೆ. ಈ ವೇಳೆ ಕವಿತಾ ಮಗುವನ್ನು ಕರೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು ಮಗುವನ್ನ ರಕ್ಷಿಸಿದ್ದಾರೆ. ಆದರೆ ಕವಿತಾ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕವಿತಾ ಸಾವಿಗೆ ಪತಿ ಶ್ರೀನಿವಾಸ್ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಶೀಲ ಶಂಕಿಸಿ ಪತ್ನಿಯ ಬರ್ಬರ ಹತ್ಯೆ – ಪಿಕಾಸಿಯಲ್ಲಿ ಹೊಡೆದು ಕೊಲೆಗೈದ ಪಾಪಿ ಪತಿ

Spread the loveಬೆಂಗಳೂರು: ಶೀಲ ಶಂಕಿಸಿ ಪತಿಯೇ ಪತ್ನಿಯ ಬರ್ಬರ ಹತ್ಯೆಗೈದಿರುವ ಘಟನೆ ಮಾರತಹಳ್ಳಿ (Bengaluru Crime) ಪೊಲೀಸ್ ಠಾಣಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ