ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆ (ಜಿಆರ್ಬಿಸಿ) ಯ ದುರಸ್ತಿ ಕಾಮಗಾರಿ ಭಾಗಶ ಪೂರ್ತಿಯಾಗಿದ್ದು, ಜನ&ಜಾನುವಾರುಗಳ ಹಿತದಷ್ಟಿಯಿಂದ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಕೋರಿದ್ದಾರೆ. ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ಮಳೆಯಾಗದ್ದರಿಂದ ಬೇಸಿಗೆಯಲ್ಲಿ ಜನ& ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಿಡಕಲ್ ಜಲಾಶಯದಿಂದ ಪ್ರತಿ ಸಲವೂ ಮೂರೂ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆಯಾದರೂ ಈ ಬಾರಿ ಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಿಲ್ಲ. ಈಗ ಕಾಮಗಾರಿಯು ಮುಗಿದಿರುವುದರಿಂದ ಜೂ.5ರಿಂದ 10 ದಿನಗಳವರೆಗೆ ಜಿಆರ್ಬಿಸಿ ಕಾಲುವೆಗೆ ನಿತ್ಯ 2,000 ಕ್ಯೂಸೆಕ್ನಂತೆ ಕುಡಿಯುವ ನೀರು ಬಿಡುಗಡೆ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.
Laxmi News 24×7