Breaking News
Home / ಜಿಲ್ಲೆ / ನಿಜವಾದ ಸಂತೋಷ ಅಂದ್ರೆ ಏನೆಂದು ತೋರಿಸಿದೆ – ಭಾವಿ ಪತ್ನಿಗೆ ಕೃಷ್ಣ ವಿಶ್

ನಿಜವಾದ ಸಂತೋಷ ಅಂದ್ರೆ ಏನೆಂದು ತೋರಿಸಿದೆ – ಭಾವಿ ಪತ್ನಿಗೆ ಕೃಷ್ಣ ವಿಶ್

Spread the love

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಿಲನಾ ನಾಗರಾಜ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ನಟ ಡಾರ್ಲಿಂಗ್ ಕೃಷ್ಣ ತಮ್ಮ ಗೆಳತಿಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.

ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಮಿಲನಾ ನಾಗರಾಜ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತ ಕೃಷ್ಣ ಕೂಡ ತಮ್ಮ ಪ್ರೇಯಸಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಕೃಷ್ಣ ವಿಶ್ ಮಾಡಿದ್ದಾರೆ.

ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ, “ನಿನ್ನ ಪ್ರೀತಿ ಪರಿಶುದ್ಧವಾಗಿದೆ. ನಿನ್ನ ಹೃದಯ ಪರಿಶುದ್ಧ. ನಿನ್ನ ನಗು ಕೂಡ ಪರಿಶುದ್ಧವಾಗಿದೆ. ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಅಲ್ಲದೇ, “ನೀನು ನಿಜವಾದ ಸಂತೋಷ ಅಂದರೆ ಏನು ಎಂಬುದನ್ನು ನನಗೆ ತೋರಿಸಿದ್ದೀಯಾ. ಇದರಿಂದ ನನಗೆ ನಿಧಿಮಾ ಪಾತ್ರ ಬರೆಯಲು ಪ್ರೇರಣೆ ನೀಡಿತು. ಹುಟ್ಟುಹಬ್ಬದ ಶುಭಾಶಯಗಳು ಮಿಲನಾ ನಾಗರಾಜ್, ಐ ಲವ್ ಯೂ ಬೇಬೂ.” ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಕೃಷ್ಣ ಶುಭ ಕೂರಿದ ತಕ್ಷಣ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಮಿಲನಾಗೆ ಹುಟ್ಟುಹಬ್ಬದ  ಶುಭಾಶಯ ತಿಳಿಸುತ್ತಿದ್ದಾರೆ.

‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿ ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಲಾಕ್‍ಡೌನ್ ಕಾರಣದಿಂದ ಇಬ್ಬರೂ ಅನೇಕ ದಿನಗಳಿಂದ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಮಿಲನಾ ‘ಮಿಸ್ಸಿಂಗ್ ಮೈ ಲವ್’ ಎಂದು ಡಾರ್ಲಿಂಗ್ ಕೃಷ್ಣ ಜೊತೆಗಿನ ಫೋಟೋ ಹಾಕಿಕೊಂಡು ತಮ್ಮ ಬೇಸರ ವ್ಯಕ್ತಪಡಿಸಿದ್ದರು.

‘ಲವ್ ಮಾಕ್‍ಟೇಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಈ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದರು. ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟವಿತ್ತು. ಇವರಿಬ್ಬರು ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿ ಜರ್ನಿಯೇ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿದೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆಗೆಬಸವರಾಜ ಬೊಮ್ಮಾಯಿ

Spread the loveಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿನಿಂದ ಕಲಬುರ್ಗಿಗೆ ತೆರಳುವು ಬೊಮ್ಮಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ