Breaking News

ಉಗ್ರ ಸಂಘಟನೆಗಳ ಜೊತೆ ನಂಟು – ಬಳ್ಳಾರಿಯ ಅಬ್ದುಲ್ ಸಲಾಮ್ ಮನೆ ಮೇಲೆ ಎನ್‌ಐಎ ದಾಳಿ

Spread the love

ಬಳ್ಳಾರಿ: ಕೌಲ್ ಬಜಾರ್ ನಿವಾಸಿ ಅಬ್ದುಲ್ ಸಲಾಮ್ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ  ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ. ಶೋಧ ಕಾರ್ಯ ನಡೆಸಿದ ಅಧಿಕಾರಿಗಳ ತಂಡ ಮಹತ್ವದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದೆ.

ಆನ್‌ಲೈನ್ ಮೂಲಕ ಧರ್ಮ ಪ್ರಚೋದನೆ ಹಾಗೂ ಮೂಲಭೂತವಾದವನ್ನು ಹರಡಿ, ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿಆಂಧ್ರಪ್ರದೇಶದ ಎನ್‌ಟಿಆರ್  ಜಿಲ್ಲೆಯಲ್ಲಿ ರೆಹಮತುಲ್ಲ ಷರಿಫ್ ಎಂಬಾತನ ವಿರುದ್ಧ ದಾಖಲಾಗಿತ್ತು.

ತನಿಖೆಯ ವೇಳೆ ರೆಹಮತುಲ್ಲ ಷರಿಫ್ ಜೊತೆಗೆ ಬಳ್ಳಾರಿಯ ಅಬ್ದುಲ್ ಸಲಾಮ್ ನಿಕಟ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 26ರಂದೇ ಎನ್‌ಐಎ ಅಧಿಕಾರಿಗಳು ಅಬ್ದುಲ್ ಸಲಾಮ್‌ನನ್ನು ಬಂಧಿಸಿದ್ದರು.

ಬಂಧಿತ ಅಬ್ದುಲ್ ಸಲಾಮ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದರೂ, ಪ್ರಕರಣದ ಆಳವಾದ ತನಿಖೆಗಾಗಿ ಎನ್‌ಐಎ ತಂಡವು ಇಂದು ಮತ್ತೆ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿರುವ ಆತನ ನಿವಾಸಕ್ಕೆ ಭೇಟಿ ನೀಡಿತ್ತು.

ಉಗ್ರ ಸಂಘಟನೆಗಳೊಂದಿಗಿನ ಚಾಟಿಂಗ್, ಆನ್‌ಲೈನ್ ಲಿಂಕ್‌ಗಳು ಹಾಗೂ ಆರ್ಥಿಕ ವಹಿವಾಟುಗಳ ಡಿಜಿಟಲ್ ಪುರಾವೆಗಳನ್ನು ಕಲೆಹಾಕಲು ಮನೆಯಲ್ಲಿದ್ದ ಪ್ರಮುಖ ಮೊಬೈಲ್ ಫೋನ್‌ ಅನ್ನು ಅಧಿಕಾರಿಗಳು ವಶ ಪಡಿಸಿದ್ದಾರೆ. ಶೋಧ ಕಾರ್ಯ ಮುಗಿದ ಬಳಿಕ ಎನ್‌ಐಎ ತಂಡವು ವಾಪಸ್ ತೆರಳಿದೆ.

ದೇಶ ವಿರೋಧಿ ಕೃತ್ಯ ಹಾಗೂ ಯುವಕರನ್ನು ಹಾದಿ ತಪ್ಪಿಸುವ ಆನ್‌ಲೈನ್ ಮೂಲಭೂತವಾದದ ಈ ಜಾಲದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಎನ್‌ಐಎ ತನಿಖೆ ಚುರುಕುಗೊಳಿಸಿದೆ.

Spread the love

About Laxminews 24x7

Check Also

ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾ

Spread the loveಲಕ್ನೋ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ