ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಭಾರತೀಯ ಕೃಷಿಕ ಸಮಾಜದ ದೇಶಾದ್ಯಂತ ಕೊರೋನ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಹಗಲಿರುಳು ಸೇವೆಯಲ್ಲಿ ತೊಡಗಿರುವ ಪೋಲಿಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಮಲ್ಲಾಪೂರ ಪಿಜಿ ಪ.ಪಂ ಪೌರ ಕಾರ್ಮಿಕರಿಗೆ ಮುಂಜಾನೆಯ ಅಲ್ಪೋಪಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜ ರಾಜ್ಯ ಉಪಾಧ್ಯಕ್ಷ ಕೊಟ್ರೇಶ.ಕೆ.ಪಟ್ಟಣಶೆಟ್ಟಿ. ಕಾರ್ಯದರ್ಶಿ ಮಾರುತಿ ಸಿಂಗಾರಿ.ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕ ಉಪಾಧ್ಯಕ್ಷೆ ಸವಿತಾ ಪಟ್ಟಣಶೆಟ್ಟಿ. ಲಕ್ಷ್ಮೀ ಮಡಿವಾಳ. ಶಾರದಾ ಮಾನೆ.ಪ.ಪಂ.ಮುಖ್ಯಾಧಿಕಾರಿ ಕೆ.ಬಿ.ಪಾಟೀಲ. ಇನ್ನೂ ಅನೇಕರು ಹಾಜರಿದ್ದರು.