ಸುರಪುರ: ಕೊರೊನಾ ಸಂಕಷ್ಟದಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದು, ಗೌರವಧನ ಸೇರಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನಗರದ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಗೆ ಸದ್ಯ ಸರ್ಕಾರ ನೀಡುತ್ತಿರುವ ಗೌರವಧನದಲ್ಲಿ ಜೀವನ ನಡೆಸುವುದು ಕಷ್ಟದ ಸಂಗತಿಯಾಗಿದ್ದು, ಕನಿಷ್ಠ 12 ಸಾವಿರ ರೂಪಾಯಿಗಳ ಗೌರವಧನ ನೀಡಬೇಕು. ಕೊರೊನಾ ಸೋಂಕು ತಗುಲದಂತೆ ರಕ್ಷಿಸಿಕೊಳ್ಳಲು ಇನ್ನೂ ಹೆಚ್ಚಿನ ರಕ್ಷಾ ಸಲಕರಣೆಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರಾದ ಶಾಂತಮ್ಮ ಹಸನಾಪುರ, ಮಲ್ಲಮ್ಮ, ಬಸ್ಸಮ್ಮ, ಗಿರಿಲಿಂಗಮ್ಮ, ಶಾಂತಾ, ಚಂದಮ್ಮ, ಮರೆಮ್ಮ, ಅಂಜಮ್ಮ,ಲಕ್ಷ್ಮೀ,ಶ್ಯಾಮಲಾಬಾಯಿ,ಭೀಮಬಾಯಿ,ಪಾರ್ವತಿ,ಸುಜಾತಾ,ಶಾಂಭವಿ,ಪದ್ಮಾವತಿ,ಮಾನಮ್ಮ ಮುಂತಾದವರು ಇದ್ದರು.