Breaking News
Home / ಜಿಲ್ಲೆ / ದಾವಣಗೆರೆ / ಕಸ ಬಿಸಾಡುವಂತೆ ಗುಂಡಿಗೆ ಶವ ಬಿಸಾಕಿದ ಜೆಸಿಬಿ!ನಿನ್ನೆ ಬಳ್ಳಾರಿ, ಇಂದು ದಾವಣಗೆರೆ

ಕಸ ಬಿಸಾಡುವಂತೆ ಗುಂಡಿಗೆ ಶವ ಬಿಸಾಕಿದ ಜೆಸಿಬಿ!ನಿನ್ನೆ ಬಳ್ಳಾರಿ, ಇಂದು ದಾವಣಗೆರೆ

Spread the love

ದಾವಣಗೆರೆ: ಸತ್ತ ಮೇಲೆ ನೂರಾರು ಜನ ಮೆರವಣಿಗೆ ಮಾಡಿ ಕಳುಹಿಸಿಕೊಡಬೇಕು ಎಂದು ಪ್ರತಿಯೊಬ್ಬರದ್ದು ಕೊನೆ ಆಸೆಯಾಗಿರುತ್ತೆ. ಆದರೆ ಈ ಕೋವಿಡ್ ಬಂದು ಸಾವನ್ನಪ್ಪಿದರೆ ಮಾತ್ರ ಯಾರೂ ಕೂಡ ಊಹಿಸಲಾಗದಷ್ಟೆ ಮಟ್ಟಿಗೆ ನಮ್ಮ ಶವಸಂಸ್ಕಾರ ಇರುತ್ತೆ.

ಹೌದು. ದಾವಣಗೆರೆಯ ಚನ್ನಗಿರಿ ತಾಲೂಕಿನ 56 ವರ್ಷದ ಮಹಿಳೆಯೊಬ್ಬರು ಕಳೆದ 17 ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದು ಕೂಡ ಅಂದೇ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಚನ್ನಗಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮಾಡಲಾಗಿತ್ತು.

 

ಆದರೆ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಸರಿಸಿದ ಕ್ರಮವನ್ನು ನೋಡಿದ್ರೆ ಯಾರು ಕೂಡ ಕೋವಿಡ್ ನಿಂದ ಸಾಯಬಾರದು ಎನ್ನುವಂತಹ ಭಯ ಹುಟ್ಟುತ್ತದೆ. ಯಾಕೆಂದರೆ ಜೆಸಿಬಿ ಮೂಲಕ ಮೃತದೇಹವನ್ನು ಎತ್ತಿಕೊಂಡು ಹೋಗಿ ಕಸವನ್ನು ಬಿಸಾಕುವಂತೆ ಬಿಸಾಕಿ ಮಣ್ಣುಮುಚ್ಚಲಾಗಿದೆ. ಈ ಹೀನಾಯ ದೃಶ್ಯ ನೋಡಿದರೆ ಎಂಥವರ ಎದೆಯಲ್ಲಿ ಭಯ ಶುರುವಾಗುವುದು ಕಾಮನ್. ಅಲ್ಲದೆ ಈ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೃತದೇಹವನ್ನು ದಫನ ಮಾಡುವಾಗ ಸಿಪಿಐ ಆರ್ ಆರ್ ಪಾಟೀಲ್, ಹಾಗೂ ತಹಶೀಲ್ದಾರ್ ಪುಟ್ಟರಾಜು ಗೌಡ ಸೇರಿದಂತೆ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಕೂಡ ಇದ್ದರು. ಅವರ ಎದುರೇ ಈ ರೀತಿಯಾದ ಹೀನಾಯವಾಗಿ ಮೃತದೇಹವನ್ನು ದಫನ ಮಾಡಿದ್ದಾರೆ.

 

ಈ ಸಂಬಂಧ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಇದುವರೆಗೂ ಸಾವನ್ನಪ್ಪಿದ ಸೋಂಕಿತರು ಅಂತ್ಯಕ್ರಿಯೆಯನ್ನು ಸರ್ಕಾರದ ಅದೇಶದಂತೆ, ಕೋವಿಡ್ ನಿಯಮಾವಳಿ ಗಳ ಪ್ರಕಾರವೇ ಮಾಡಲಾಗಿದೆ. ಏನಾದರೂ ಲೋಪದೋಷ ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಏನೇ ಆಗಲಿ ಈ ರೀತಿ ಕೋವಿಡ್ ಸೋಂಕು ಬಂದು ಸಾವನ್ನಪ್ಪಿದವರನ್ನು ಹೀಗೆ ಕಸದ ರೀತಿ ಹಾಕಿ ಅಂತ್ಯಕ್ರಿಯೆ ಮಾಡುವುದು ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವ ಕೆಲಸವಾಗಿದೆ.


Spread the love

About Laxminews 24x7

Check Also

ಖತಲ್‌ ರಾತ್ರಿ ಮಾಡುವವರೇ ಕಾಂಗ್ರೆಸ್ಸಿಗರು: ಬಸವರಾಜ ಬೊಮ್ಮಾಯಿ

Spread the loveವಿಜಯಪುರ : ‘ಖತಲ್‌ ರಾತ್ರಿ’ ಮಾಡುವವರೇ ಕಾಂಗ್ರೆಸ್ ಪಕ್ಷದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸಿಂದಗಿ ಮತಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ