ಬೆಳಗಾವಿ: ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಆದ್ರೂ ಕೂಡ ಭಾನುವಾರ ಬೆಳಗಾವಿಯಲ್ಲಿ ಅನಿರೀಕ್ಷಿತವಾಗಿ ನಗರದ ಹಲವೆಡೆ ಮಳೆ ಸುರಿದಿದೆ.
ದಿನವಿಡಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ನಂತರ ನಗರದ ವಿವಿಧೆಡೆ ಮಳೆ ಸುರಿದಿದೆ. ನಿನ್ನೆ ರಾತ್ರಿಯೂ ಕೂಡ ನಗರದ ವಿವಿಧೆಡೆ ಸಣ್ಣ ಪ್ರಮಾಣದ ಮಳೆ ಸುರಿದಿತ್ತು.
ಇಂದು ಮಧ್ಯಾಹ್ನ 4 ಸುಮಾರಿಗೆ ಮತ್ತೆ ಕೆಲ ಕಾಲ ಸುರಿದ ಅನಿರೀಕ್ಷಿತ ಮಳೆಗೆ ಜನತೆಗೆ ಅಚ್ಚರಿ ಮೂಡಿಸಿದೆ.