Breaking News

ಸೀಜ್ ಮಾಡಲಾದ ಸಾವಿರಾರು ವಾಹನಗಳಿಂದ ಮೈದಾನ ಫುಲ್

Spread the love

ಕಲಬುರಗಿ: ಕೊರೊನಾ ನಿಯಂತ್ರಿಸಲು, ರಾಜ್ಯಾದ್ಯಂತ ಲಾಕ್​​ಡೌನ್ ಜಾರಿಯಲ್ಲಿದೆ. ಅಗನತ್ಯವಾಗಿ ಹೊರಗಡೆ ಓಡಾಡದಂತೆ ಜನರಿಗೆ ಸೂಚನೆ ನೀಡಲಾಗಿದೆ. ಆದ್ರೂ ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ಹೊರಗಡೆ ಓಡಾಡುವ ಸಾವಿರಾರು ವಾಹನಗಳನ್ನ ಪೊಲೀಸರು ಸೀಜ್ ಮಾಡ್ತಿದ್ದಾರೆ. ಕಲಬುರಗಿಯಲ್ಲಿ ಹೀಗೆ ಜಪ್ತಿ ಮಾಡಲಾದ ವಾಹನಗಳಿಂದ ಇಡೀ ಮೈದಾನವೇ ತುಂಬಿಹೋಗಿದೆ.

 

ಅನಗತ್ಯವಾಗಿ ಹೊರಬಂದವರ ಬೈಕ್ ಹಾಗೂ ಕಾರ್​ಗಳನ್ನ ಸೀಜ್ ಮಾಡಿರುವ ಪೊಲೀಸರು, ಅವುಗಳನ್ನ ಡಿಎಆರ್ ಮೈದಾನದಲ್ಲಿ ಪಾರ್ಕ್‌ ಮಾಡ್ತಿದ್ದಾರೆ. ಜಪ್ತಿಯಾದ ಬೈಕ್, ಕಾರ್, ಆಟೋಗಳನ್ನ ಪ್ರತಿದಿನ ಇಲ್ಲಿಗೆ ತಂದು ನಿಲ್ಲಿಸುತ್ತಿದ್ದಾರೆ. ಸಾಲು ಸಾಲಾಗಿ ನಿಂತಿರೋ ಸಾವಿರಾರು ವಾಹನಗಳಿಂದ ಈಗ ಮೈದಾನ ತುಂಬಿ ತುಳುಕುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ