Breaking News
Home / Uncategorized / ದ್ವಿಚಕ್ರ ವಾಹನದಲ್ಲಿ ಇವಿಎಂ ಸಾಗಿಸ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

ದ್ವಿಚಕ್ರ ವಾಹನದಲ್ಲಿ ಇವಿಎಂ ಸಾಗಿಸ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

Spread the love

ಚೆನ್ನೈ (ತಮಿಳುನಾಡು) : ದ್ವಿಚಕ್ರ ವಾಹನದಲ್ಲಿ ಎಲೆಕ್ಟ್ರಾನಿಕ್​ ವೋಟಿಂಗ್​ ಮೆಷಿನ್​ (ಇವಿಎಂ) ಸಾಗಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಚೆನ್ನೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಘಟನೆ ವೇಲಚೇರಿ ಏರಿಯಾದಲ್ಲಿ ನಡೆದಿದೆ.

ಇವಿಎಂ ಬದಲಾಯಿಸಲಿಸಲು ಬೈಕ್​ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯರು ಗಮನಿಸಿ ಇಬ್ಬರನ್ನು ಇವಿಎಂ ಸಮೇತ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ಇವಿಎಂ ಬಗ್ಗೆ ಮಾತನಾಡಿರುವ ತಮಿಳುನಾಡು ಮುಖ್ಯ ಚುನಾವಣಾಧಿಕಾರಿ, ವಶಪಡಿಸಿಕೊಂಡಿರುವ ಇವಿಎಂಗಳು ಮೀಸಲು ಘಟಕಗಳಾಗಿದ್ದು, ಮಂಗಳವಾರ ಮತದಾನಕ್ಕೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

ತಮಿಳುನಾಡಿನಾದ್ಯಂತ ಒಂದೇ ಹಂತದಲ್ಲಿ ನಿನ್ನೆ ವಿಧಾನಸಭಾ ಚುನಾವಣೆ ನಡೆದಿದ್ದು, ಶೇ. 71.79 ರಷ್ಟು ಮತದಾನ ನಡೆದಿದೆ. ಮತದಾನದಲ್ಲಿ ಕಾಲಿವುಡ್​ನ ಸಾಕಷ್ಟು ಕಲಾವಿದರು ಭಾಗಿಯಾಗಿದ್ದು ತುಂಬಾ ವಿಶೇಷ. ಅದರಲ್ಲೂ ನಟ ವಿಜಯ್​ ಅವರು ಸೈಕಲ್​ ಮೇಲೆ ಬಂದು ಮತದಾನ ಮಾಡಿದ್ದು, ಇಡೀ ದಿನ ಸುದ್ದಿಯಾಯಿತು


Spread the love

About Laxminews 24x7

Check Also

ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

Spread the love ವಿಜಯಪುರ: ಯಾವುದೇ ಕಾರಣಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಸಾರಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ