Breaking News

ಕೊರೊನಾ ಮುಕ್ತ ಉತ್ತರ ಕೊರಿಯಾ..!!

Spread the love

ಸಿಯೋಲ್,ಏ.7-ಇಡೀ ವಿಶ್ವವೇ ಕೊರೊನಾ ಸೋಂಕಿನಿಂತ ತತ್ತರಿಸಿ ಹೋಗಿದ್ದರು. ಉತ್ತರ ಕೋರಿಯಾ ಮಾತ್ರ ನಮ್ಮ ದೇಶ ಸೋಂಕು ರಹಿತವಾಗಿದೆ ಎಂದು ಘೋಷಿಸಿಕೊಂಡಿದೆ. ಕೊರೊನಾ ಕಾಣಿಸಿಕೊಂಡ ನಂತರ ನಾವು ನಮ್ಮ ದೇಶದಿಂದ ಸೋಂಕು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಉತ್ತರ ಕೋರಿಯಾ ಹೇಳಿತ್ತು.

ಇದೀಗ ಮತ್ತೆ ತನ್ನ ಹೇಳಿಕೆಯನ್ನು ಪುನರುಚ್ಚರಿಸಿರುವ ಕೋರಿಯಾ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿರುವ ದಾಖಲೆಯಲ್ಲಿ ನಾವು ಸೋಂಕಿನಿಂದ ಮುಕ್ತರಾಗಿದ್ದೇವೆ ಎಂದು ಹೇಳಿಕೆ ನೀಡಿದೆ. ನಮ್ಮ ರಾಷ್ಟ್ರದ ಗಡಿಭಾಗಗಳನ್ನು ಬಂದ್ ಮಾಡಿದ್ದೇವೆ. ಪ್ರವಾಸಿಗರು ಹಾಗೂ ರಾಜತಾಂತ್ರಿಕರಿಗೂ ಪ್ರವೇಶ ನಿರಾಕರಿಸಲಾಗಿದೆ.ನಂತರ ಎಲ್ಲರ ವರದಿಯೂ ನೆಗಿಟಿವ್ ಆಯಿತು. ಆ ನಂತರ ಯಾರೊಬ್ಬರಿಗೂ ಸೋಂಕು ತಗುಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಉತ್ತರ ಕೋರಿಯಾ ಪ್ರತಿನಿಧಿಯಾಗಿರುವ ಎಡ್ವೀನ್ ಸಲ್ವಡಾರ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Spread the loveಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ