Breaking News
Home / ಸಿನೆಮಾ / ಅಜಯ್ ದೇವಗನ್‌ ಗೆ RRR ತಂಡದಿoದ ಸ್ಪೆಷಲ್ ಗಿಫ್ಟ್…!

ಅಜಯ್ ದೇವಗನ್‌ ಗೆ RRR ತಂಡದಿoದ ಸ್ಪೆಷಲ್ ಗಿಫ್ಟ್…!

Spread the love

ಹೈದಾರಬಾದ್ – ಬಹುನಿರೀಕ್ಷಿತ ಟಾಲಿವುಡ್‌ ನ ಆರ್‌ ಆರ್‌ ಆರ್ ಸಿನಿಮಾದಿಂದ ದಿನೇ ದಿನೇ ಸಿನಿಮಾ ಪಾತ್ರಧಾರಿಗಳ ಲುಕ್ ರಿವೀಲ್ ಆಗುತ್ತಿದೆ. ಅಜಯ್ ದೇವಗನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರದ ಚಿಕ್ಕ ವಿಡಿಯೋ ಒಂದನ್ನು ಚಿತ್ರತಂಡ ರಿಲೀಸ್ ಮಾಡಿದೆ.

1920ಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೋಮರಾಮ್ ಭೀಮ್ ಅವರ ಸುತ್ತ ನಡೆಯುವ ಕಥೆ ಆರ್‌ಆರ್‌ಆರ್ ಚಿತ್ರದಲ್ಲಿದೆ. ಬಾಹುಬಲಿ ನಂತರ ರಾಜಮೌಳಿ ಈ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾದ ನಾಯಕ -ನಾಯಕಿಯರ ಪಾತ್ರದ ಪರಿಚಯ ಮಾಡಿದ್ದು, ವಿಲನ್ ಅಜಯ್ ದೇವಗನ್ ಅವರ ಪಾತ್ರ ಹೇಗಿರಬಹುದು? ಎಂಬ ಕುತೂಹಲಕ್ಕೆ ಇಂದು ಉತ್ತರ ಸಿಕ್ಕಿದೆ.

ಇಂದು ಬಾಲಿವುಡ್ ನಟ ಅಜಯ್ ದೇವಗನ್ ಅವರ ಹುಟ್ಟುಹಬ್ಬವಿರುವ ಪ್ರಯುಕ್ತ ಚಿತ್ರತಂಡ ಒಂದು ಉಡುಗೊರೆ ನೀಡಿದೆ. ಅವರ ಪಾತ್ರದ ಸಣ್ಣ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಅಜಯ್ ದೇವಗನ್ ಅವರ ಹೊಸ ಅವತಾರಕ್ಕೆ ಅಭಿಮಾನಿಗಳು ಸೈ ಎಂದಿದ್ದಾರೆ.

ಈ ಸಿನಿಮಾದಲ್ಲಿ ರಾಮ್ ಚರಣ್, ಜೂ.ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೊರಿಸ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ ಹಿಂದೆ ರಾಮ್ ಚರಣ್ ಪೋಸ್ಟರ್ ರಿಲೀಸ್ ಮಾಡಿದ್ದು, ರಾಮನ ಅವತಾರದಲ್ಲಿದ್ದ ರಾಮ್ ಚರಣ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದರಿಂದ ಚಿತ್ರದ ಮೇಲೆ ನಿರೀಕ್ಷೆಗಳು ಇನ್ನೂ ದುಪ್ಪಟ್ಟಾಗುತ್ತಿದ್ದು, ಸಿನಿಮಾ ನೋಡಲು ಅಕ್ಟೋಬರ್ 13ರ ವರೆಗೆ ಕಾಯಬೇಕಿದೆ.


Spread the love

About Laxminews 24x7

Check Also

ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷ

Spread the love ಕನ್ನಡದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್ ಅವರು​ ಇಹಲೋಕ ತ್ಯಜಿಸಿ ಇಂದಿಗೆ 2 ವರ್ಷವಾಗುತ್ತಿದೆ. ಪುಣ್ಯಸ್ಮರಣೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ