Breaking News

ನರಹಂತಕ ಜೋಡಿ ಸಲಗಗಳ ಸೆರೆಗೆ ಮುಂದುವರಿದ ಕಾರ್ಯಾಚರಣೆ

Spread the love

ಹಾಸನ: ಚಿಕ್ಕಮಗಳೂರು – ಹಾಸನ  ಗಡಿ ಭಾಗದಲ್ಲಿ ನರಹಂತಕ ಜೋಡಿ ಸಲಗಳ  ಸೆರೆಗೆ  ಸಹ ಕಾರ್ಯಾಚರಣೆ ಮುಂದುವರಿದಿದೆ.

ಬುಧವಾರ ಇಡೀ ದಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಅನೆ ಸೆರೆಗೆ ಕಾರ್ಯಾಚರಣೆ ನಡೆದಿತ್ತು. ಇಡೀ ದಿನ ಪ್ರಯತ್ನಪಟ್ಟರೂ ಕಾಡಾನೆಗಳು ಸಿಗದೆ ಪರಾರಿಯಾಗಿದ್ದವು.

ಕೆಲವು ತಿಂಗಳಿಂದ ಜೊತೆ ಜೊತೆಯಾಗಿ ಎರಡು ಪುಂಡಾನೆಗಳು ಓಡಾಡುತ್ತಿವೆ. ಇದೇ ಆನೆಗಳಿಂದ ಇಬ್ಬರು ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹಾಗಾಗಿಯೇ ಈ ಆನೆಗಳನ್ನೇ ಮೊದಲು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ.

ರಾತ್ರಿಯಿಡೀ ಅರೆಹಳ್ಳಿ, ಬಿಕ್ಕೋಡು ಭಾಗದಲ್ಲಿ ಈ ಸಲಗಗಳು ಓಡಾಡಿವೆ. ಇವು ಎಲ್ಲಿಯೂ ನಿಲ್ಲದೆ ಓಡಾಡುತ್ತಿವೆ. ಆನೆ ಬೆನ್ನಟ್ಟಿದರೂ ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಇವು ಎಸ್ಕೇಪ್ ಆಗುತ್ತಿವೆ. ಸತತ ಮೂರು ದಿನಗಳಿಂದ ಆನೆ ಸೆರೆ ಹಾಗೂ ಸ್ಥಳಾಂತರ ಕಾರ್ಯಾಚರಣೆ ನಡೆಯುತ್ತಿದೆ.


Spread the love

About Laxminews 24x7

Check Also

ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯೊಳಗೇ ಹೋರಾಟ: ರಾಹುಲ್ ಗಾಂಧಿ

Spread the loveನವದೆಹಲಿ: ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಬದಲಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕವೇ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ