ಬೆಂಗಳೂರು: ಸಿಎಂ ನಿವಾಸ ಕುಮಾರಕೃಪ ಹೆಸರು ಬದಲಾವಣೆಗೆ ಯಾಕೆ ವಿರೋಧ ಮಾಡುತ್ತಾರೆ ಎಂದು ಸಚಿವ ಯು.ಟಿ. ಖಾದರ್ ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ಮುಖ್ಯಮಂತ್ರಿಗಳ ಹೊಸ ಮನೆ ಗೃಹ ಪ್ರವೇಶ ಆಗಿದೆ. ಶುಭಾಶಯ ಕೋರುತ್ತೇನೆ. ಗಂಗಾ ಹೆಸರು ಯಾಕೆ ಬದಲಾವಣೆ ಮಾಡಬಾರದು. ರಾಜ್ಯದ ಜನ ಒಪ್ಪುತ್ತಾರೆ. ಗಂಗೆ ಹೆಸರು ಇಟ್ಟಿದ್ದಾರೆ. ಏನು ತಪ್ಪಿದೆ? ಆ ಹೆಸರು ಇಟ್ಟರೆ ಏನು ಪ್ರಾಬ್ಲಂ ಎಂದು ಪ್ರಶ್ನಿಸಿದರು.
ಕುಮಾರಕೃಪಾಗೆ ಏನು ಇತಿಹಾಸ ಇದೆ? ಕುಮಾರಕೃಪ ಅಂತ ಅವತ್ತೇ ಹೆಸರು ಇಟ್ಟಿದ್ದರು. ಈಗ ಗಂಗೆ ಹೆಸರು ಪವಿತ್ರ ಹೆಸರು ಇಟ್ಟರೆ ಏನು ಸಮಸ್ಯೆ. ಕಾವೇರಿ, ಗಂಗೆ ಇದೆ. ತಪ್ಪೇನಿದೆ? ಎಂದು ಹೆಸರು ಬದಲಾವಣೆ ಸಮರ್ಥನೆ ಮಾಡಿಕೊಂಡರು.
Laxmi News 24×7