Breaking News

ಗ್ರಾಮ ಪಂಚಾಯತ್‌ ಭರ್ತಿ 8 ಸಾವಿರ ಹುದ್ದೆಗಳು ಖಾಲಿ ;

Spread the love

ಬೆಂಗಳೂರು : ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆದು, ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಿ ಪೂರ್ಣ ಪ್ರಮಾಣದಲ್ಲಿ ಪಂಚಾಯತ್ಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಬಹುತೇಕ ಕಡೆ ಖಾಲಿ ಹುದ್ದೆಗಳು ಹೊಸ ಅಧ್ಯಕ್ಷ- ಉಪಾಧ್ಯಕ್ಷರನ್ನು ಸ್ವಾಗತಿಸುವ ಸ್ಥಿತಿ ಇದೆ.

ಬಹುತೇಕ ಗ್ರಾ.ಪಂ.ಗಳಲ್ಲಿ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿ, ದ್ವಿ.ದ. ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇವೆ. ಕೊರೊನಾ ಕಾರಣಕ್ಕೆ ಆರ್ಥಿಕ ಮಿತವ್ಯಯ ಹೇರಿದ್ದರ ಪರಿಣಾಮ ಒಂದು ವರ್ಷದಿಂದ ಹೊಸ ನೇಮಕ ಆಗಿಲ್ಲ. ಇದು ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿವೆ.

ಸಂಸದರು, ಸಚಿವರ ಸೇವೆಗೆ ಪಿಡಿಒಗಳು
ರಾಜ್ಯದ ಸಂಸದರು, ಕೇಂದ್ರ ಸಚಿವರು, ರಾಜ್ಯದ ಸಚಿವರು, ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ಬಳಿ ನಿಯೋಜನೆ ಮತ್ತು ಅನ್ಯ ಕಾರ್ಯ ನಿಮಿತ್ತ 50ಕ್ಕೂ ಹೆಚ್ಚು ಮಂದಿ ಪಿಡಿಒಗಳನ್ನು ನಿಯೋಜಿಸಲಾಗಿದೆ.

8 ಸಾವಿರ ಹುದ್ದೆಗಳು ಖಾಲಿ
ಗ್ರಾ. ಮತ್ತು ಪಂ. ರಾಜ್‌ ಇಲಾಖೆಯಲ್ಲಿ ಒಟ್ಟು 4,928, ಪಂ. ರಾಜ್‌ ಎಂಜಿನಿಯರಿಂಗ್‌ ಇಲಾಖೆಯಲ್ಲಿ 1,537, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 1,594 ಹುದ್ದೆ ಖಾಲಿ ಇವೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ