Breaking News

1 ಕೆ.ಜಿ. 320 ಗ್ರಾಂ ಗಾಂಜಾ ವಶ….

Spread the love

ಬೆಳಗಾವಿ – ಸಿಐಡಿ ಬೆಳಗಾವಿ ಘಟಕದ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್‌  ಲಕ್ಷ್ಮಣ ಹುಂಡರದ ರವರಿಗೆ ಬಂದ ಬಾತ್ಮಿ ಮೇರೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ.
ಜುದಾಯಿನಗರದ ವಾಸಿ ಫಾರುಕ್ ಖಾನ್ ತಂದೆ ಅಲಮನವಾಜ್ ಖಾನ್, 35 ವರ್ಷ ಈತನನ್ನು ಹಿಡಿದು ಈತನ ಬಳಿಯಿಂದ 1 ಕೆ.ಜಿ. 320 ಗ್ರಾಂ ಗಾಂಜಾ ಅಂದಾಜು ಕಿಮ್ಮತ್ತು 19,800/ ಒಂದು ಮೊಬೈಲ್ ಫೋನ್ ಹಾಗೂ ನಗದು ಹಣ ರೂ.400/- ಗಳನ್ನು ಜಪ್ತು ಮಾಡಿದ್ದು ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಪತ್ತೆಹಚ್ಚಿ ದಾಳಿ ಮಾಡುವಲ್ಲಿ ಸಿಐಡಿ ಎನ್ ಡಿಸಿ ಬೆಳಗಾವಿ ಘಟಕದ ಸಿಬ್ಬಂದಿಯವರಾದ ಜಗದೀಶ ಬಾಗನವರ, ಜಿ.ಆರ್‌.ಶಿರಸಂಗಿ, ಚಿದಂಬರ ಚಟ್ಟರಕ್ಕಿ ಭಾಗವಹಿಸಿದ್ದು, ದಾಳಿ ಸಮಯದಲ್ಲಿ ಕುಡಚಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ