Breaking News
Home / ರಾಜ್ಯ / ಹೆಣ್ಣು ಆಗಿರಲಿ ಅಥವಾ ಗಂಡು ಆಗಿರಲಿ ಎಲ್ಲರೂ ಸಮಾನರು. : ಡಾ.ಸೋನಾಲಿ ಸರ್ನೋಬತ್

ಹೆಣ್ಣು ಆಗಿರಲಿ ಅಥವಾ ಗಂಡು ಆಗಿರಲಿ ಎಲ್ಲರೂ ಸಮಾನರು. : ಡಾ.ಸೋನಾಲಿ ಸರ್ನೋಬತ್

Spread the love

ಬೆಳಗಾವಿ:  ಹೆಣ್ಣು ಆಗಿರಲಿ ಅಥವಾ ಗಂಡು ಆಗಿರಲಿ ಎಲ್ಲರೂ ಸಮಾನರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲಾ, ಮಹಿಳೆಯರು ರೈಲ್ವೆ ಚಾಲಕೆಯರು, ಪೈಲೆಟ್ ಸಹ ಆಗಿದ್ದಾರೆ. ಆದ್ದರಿಂದ ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ರಾಣ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳು ನುಡಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ಸಬಲೀಕರಣ ದಿನದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಪುರುಷರಿಗಿಂತ ತಾಳ್ಮೆಯುಳ್ಳವರು, ಶಕ್ತಿಯುಳ್ಳವರು, ದೇಶದಲ್ಲಿ ಎರಡು ಮೂರು ರಾಜ್ಯಗಳನ್ನು ಬಿಟ್ಟರೆ ಎಲ್ಲಾ ಕಡೆಗೂ ಬಹಳ ಸದೃಢವಾಗಿ ಹೆಣ್ಣು ಮಕ್ಕಳು ಬೆಳೆದಿದ್ದಾರೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಈ ಸಂದರ್ಭದಲ್ಲಿ ಉದಾಹರಣೆ ಮೂಲಕ ತಿಳಿಸಿಕೊಟ್ಟರು. ಮದುವೆಯಾದ ಹೆಣ್ಣು ಮಕ್ಕಳು ತನ್ನ ಗಂಡ ತೀರಿ ಹೋದಾಗ ಅವಳು ತನ್ನ ಮಗುವನ್ನು ನೋಡಿ ತನ್ನ ಬದುಕನ್ನು ಮುಂದುವರೆಸುತ್ತಾಳೆ. ಆದರೆ ಗಂಡು ತನ್ನ ಹೆಂಡತಿ ಸತ್ತು ಕೆಲವೆ ತಿಂಗಳಲ್ಲಿ ಮರುಮದುವೆಯಾಗುತ್ತಾನೆ, ಆದ್ದರಿಂದ ಹೆಣ್ಣಿನ ತ್ಯಾಗ ಬಹಳ ದೊಡ್ಡದು ಎಂದರು.
ದೆಹಲಿಯ ಲಲಿತಕಲಾ ಆಕಾಡೆಮಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಅವರು ಮಾತನಾಡಿ, ಮಹಿಳೆಯರು ಮಹಾಶಕ್ತಿಯ ಅವತಾರ, ಆದ್ದರಿಂದ ಅವರು ಸಬಲೆಯರು ಎಂದರು. ಪ್ರತಿ ದಿನವೂ ಮಹಿಳಾ ದಿನವೇ ಇರುತ್ತದೆ. ಮಹಿಳೆ ಅನೇಕ ಮೆಟ್ಟಿಲುಗಳನ್ನು ಹೊಂದಿರುತ್ತಾಳೆ. ಮಗುವಾಗಿ, ಮಡದಿಯಾಗಿ, ತಾಯಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾಳೆ, ಈಗಾಗಲೇ ಸಾಕಷ್ಟು ಪ್ರಾಬಲ್ಯತೆಯನ್ನು ಹೆಣ್ಣು ಹೊಂದಿದ್ದಾಳೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ ಜಯಪ್ಪ ಅವರು ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಮಹಿಳಾ ಘಟಕವು ಬಹಳ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಬಹಳ ಸಕಾರಾತ್ಮಕ ಕಾರ್ಯಕ್ರಮಗಳನ್ನು ಇಲ್ಲಿಯ ತನಕ ಮಾಡಿಕೊಂಡು ಬಂದಿದ್ದಾರೆ. ಸದೃಢ ಭಾರತಕ್ಕೆ ಸದೃಢ ಮಹಿಳೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ರೂಪಿಸಿದ್ದಾರೆ. ನಮ್ಮ ಮಹಾವಿದ್ಯಾಲಯದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ನಾವು ವಿದ್ಯಾರ್ಥಿನಿಯರನ್ನು ಉತ್ತಮ ರೀತಿಯಿಂದ ಬೆಳಸುತ್ತಿದ್ದೇವೆ ಎಂದರು.

ಕೋವಿಡ್-೧೯ ಸಂದರ್ಭದಲ್ಲಿ ಸಮಾಜಸೇವೆಗೈದ ಕಾರ್ಯಕರ್ತೆಯರಾದ ಶಕುಂತಲಾ ಮಠಪತಿ, ಸುವರ್ಣಾ ಶಿಂದೆ, ಪದ್ಮಾ ಕಾಂಬಳೆ, ರೇಖಾ ಮಾಳಗಿ, ಆರತಿ ಹೆಗ್ಗಣ್ಣವರ, ಅವರನ್ನು ಸನ್ಮಾನಿಸಲಾಯಿತು, ಶ್ರೆಯಾ ದೇಶಪಾಂಡೆ ಮಹಾವಿದ್ಯಾಲಯದ ಮಕ್ಕಳಿಂದ ದಂಡ ಪ್ರದರ್ಶನ ಮಾಡಿಸಿದರು. ಪೂಜಾ ಮಠಪತಿ, ಪ್ರಾರ್ಥಿಸಿದರು. ಡಾ. ಶೋಭಾ ನಾಯ್ಕ ಪ್ರಾಸ್ತಾವಿಕವಾಗಿ ನುಡಿದರು. ಯಾಸ್ಮೀನ ಬೇಗಂ ನದಾಫ ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕರು ಡಾ. ಸುಮನ ಮುದ್ದಾಪೂರ ಅತಿಥಿಗಳನ್ನು ಪರಿಚಯಿಸಿದರು. ಸಹಕಾರ್ಯದರ್ಶಿ ಡಾ. ಕವಿತಾ ಕುಸುಗಲ್ಲ ವಂದಿಸಿದರು. ಡಾ. ರಾಧಾ ಬಿ ಆರ್, ಕಾರ್ಯಕ್ರಮವನ್ನು ನಿರೂಪಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ