Home / ರಾಜ್ಯ / ವಿದ್ಯುತ್ ಉತ್ಪಾದನೆಗೆ ಬ್ಯಾರೇಜ್ ನಿರ್ಮಾಣ, ದೀಪದ ಬುಡಕ್ಕೆ ಕತ್ತಲು; ಸಿಎಂ ಸಾಹೇಬ್ರೇ ಪರಿಹಾರ ನೀಡಿ!

ವಿದ್ಯುತ್ ಉತ್ಪಾದನೆಗೆ ಬ್ಯಾರೇಜ್ ನಿರ್ಮಾಣ, ದೀಪದ ಬುಡಕ್ಕೆ ಕತ್ತಲು; ಸಿಎಂ ಸಾಹೇಬ್ರೇ ಪರಿಹಾರ ನೀಡಿ!

Spread the love

ಯಾದಗಿರಿ: ಕರ್ನಾಟಕ ರಾಜ್ಯಕ್ಕೆ ಬೆಳಕಿನ ಸೌಲಭ್ಯ ಕಲ್ಪಿಸುವ ಆರ್ ಟಿಪಿಎಸ್ ಕೇಂದ್ರವು ಈಗ ರೈತರ ಜೀವಕ್ಕೆ ಮಾತ್ರ ಕತ್ತಲಾಗಿಸಿದೆ. ರಾಯಚೂರಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್ ಕೇಂದ್ರಕ್ಕೆ ವಿದ್ಯುತ್ ಉತ್ಪಾದನೆ ಗಾಗಿ ನೀರು ಪೂರೈಕೆ ಮಾಡಲು ಸರಕಾರ 2016 ನೆ ಸಾಲಿನಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ. ಬ್ಯಾರೇಜ್ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದಿದ್ದು, ಈಗ ಬ್ಯಾರೇಜ್ ರೈತರ ಪಾಲಿಗೆ ಜಲಕಂಟಕ ತಂದಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಗ್ರಾಮದ ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ಸರಕಾರ 2016 ರಲ್ಲಿ ಬ್ರಿಡ್ಜ್ ‌ಕಂ‌ ಬ್ಯಾರೇಜ್ ನಿರ್ಮಾಣ ಮಾಡಿದೆ‌. ಆದರೆ, ಬ್ಯಾರೇಜ್ ನಿರ್ಮಾಣದಿಂದ ಹಿನ್ನೀರು ಸಂಗ್ರಹಗೊಂಡ ಹಿನ್ನೆಲೆ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದಲ್ಲಿ 60 ಎಕರೆ ಭೂಮಿ ಇದ್ದ ರೈತರು ಕಳೆದ ನಾಲ್ಕು ವರ್ಷದಿಂದ ಸಂಕಷ್ಟ ಎದುರಿಸುತ್ತಿದ್ದಾರೆ‌. ಶಿವಪುರ, ಗೋನಾಲ, ಗುಂಡ್ಲುರು ಗ್ರಾಮದ ರೈತರ ಜಮೀನು ಕೃಷ್ಣಾ ನದಿಯ ನಡುಗಡ್ಡೆಯಲ್ಲಿದ್ದು ಬ್ಯಾರೇಜ್ ನಿರ್ಮಾಣ ಮುನ್ನ ರೈತರು ಮಳೆಗಾಲ ಹೊರತು ಪಡಿಸಿ ಉಳಿದ ಕಾಲಾವಧಿಯಲ್ಲಿ ಕೃಷ್ಣಾ ನದಿ ಮೂಲಕ ಜಮೀನಿಗೆ ತೆರಳಿ‌ ಬೆಳೆ ಬೆಳೆಯುತ್ತಿದ್ದರು. ಆದರೆ, ಬ್ಯಾರೇಜ್ ನಿರ್ಮಾಣದಿಂದ ಹಿನ್ನೀರು ಸಂಗ್ರಹವಾಗುತ್ತಿರುವ ಪರಿಣಾಮ ಬೆಳೆ ಬೆಳೆಯಲು ಕೂಡ ಸಾಧ್ಯವಾಗಿಲ್ಲ. ಈಗ ಜಮೀನಿಗೆ ತೆರಳಲು ಸೇತುವೆ ‌ಕೂಡ ಇಲ್ಲ ಹೀಗಾಗಿ ಮೋಸಳೆ ಭೀತಿ ಹಿನ್ನೆಲೆ ಜಮೀನಿಗೆ ಜಾನುವಾರು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಬೆಳೆ ಹಾನಿ ಪರಿಹಾರ ಕಲ್ಪಿಸಬೇಕು, ಜಮೀನಿಗೆ ತೆರಳಲು ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯ ಮಾಡಿದರು. ಆದರೆ, ಸುಳ್ಳು ಭರವಸೆ ಮಾತ್ರ ಸಿಕ್ಕಿದೆ. ಕಳೆದ ವರ್ಷ ಕೂಡ ರೈತರು ಬ್ಯಾರೇಜ್ ‌ಮೇಲ್ಬಾಗದಲ್ಲಿಯೇ ಪ್ರತಿಭಟನೆ ನಡೆಸಿ ಆರ್ ಟಿಪಿಎಸ್ ಹಾಗೂ ಯಾದಗಿರಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದರು. ಖುದ್ದು ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರು‌ ಕೂಡ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ಸಮಸ್ಯೆಗೆ ಪರಿಹಾರ‌ ಕಲ್ಪಿಸಲಾಗುತ್ತದೆಂದು ಭರವಸೆ ನೀಡಿದರು. ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದರು‌. ಆದರೆ, ಯಾವುದೇ ಸಮಸ್ಯೆ ಪರಿಹಾರ‌ ಕಂಡಿಲ್ಲ. ಪದೇ ಪದೇ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ.

ಸಿಎಂಗೆ ಕೈ ಮುಗಿದು ಮನವಿ ಮಾಡಿದ ರೈತ:
ಈ ಬಗ್ಗೆ ರೈತರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಿಎಂ ಬಿಎಸ್ ಯಡಿಯೂರಪ್ಪ ಸಾಹೇಬ್ರೇ, ನೀವು‌ ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೀರಿ. ನಿಮ್ಮ ಮೇಲೆ ರೈತರು ಅಪಾರ ನಂಬಿಕೆ ಇಟ್ಟುಕೊಂಡಿದ್ದು ನಮಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ರೈತ ಬಸವರಾಜಪ್ಪಗೌಡ ಮಾತನಾಡಿ, ಸರಕಾರ ಕೂಡಲೇ ಭೂಮಿ ಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ. ಈಗ ಆರ್ ಟಿಪಿಎಸ್ ಅಧಿಕಾರಿಗಳು ಗೇಟ್ ಹಾಕಲು ಮುಂದಾಗುತ್ತಿರುವ ಹಿನ್ನೆಲೆ ಕೂಡಲೇ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.ಈ ಬಗ್ಗೆ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ಮಾತನಾಡಿ, ಈ ಬಗ್ಗೆ ಪರಿಶೀಲನೆ ಮಾಡಿ ಪರಿಹಾರ ಕಲ್ಲಿಸುವ ಕೆಲಸ ಮಾಡಲಾಗುತ್ತದೆ ಎಂದರು.

ದೀಪದ ಬುಡಕ್ಕೆ ಕತ್ತಲು ಎನ್ನುವಂತೆ ವಿದ್ಯುತ್ ಉತ್ಪಾದನೆಗೆ ನಿರ್ಮಾಣ ಮಾಡಿದ ಬ್ಯಾರೇಜ್ ನಿಂದ ಈಗ ರೈತರ ಜೀವ ಕತ್ತಲಾಗಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸಬೇಕಾಗಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ