Breaking News

ಮೈಸೂರು: ಪಾರ್ಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

Spread the love

ಮೈಸೂರು, ಮಾರ್ಚ್ 9: ಮೈಸೂರು ನಗರದಲ್ಲಿ ಮಂಗಳವಾರ ಅಪರೂಪದ ಹೆರಿಗೆಯಾಗಿದೆ. ಸಿನಿಮೀಯ ಶೈಲಿಯಲ್ಲಿ ತಾಯಿಯೊಬ್ಬಳು ಉದ್ಯಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.

ಮೈಸೂರು ನಗರದ ಹೃದಯ ಭಾಗದಲ್ಲಿರುವ ಪೀಪಲ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಕೊಡಗು ಮೂಲದ ಮಹಿಳೆ ಪಾರ್ಕ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ತುಂಬು ಗರ್ಭಿಣಿ ಆಗಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಪಾರ್ಕ್‌ನಲ್ಲಿ ಕುಳಿತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಮಹಿಳೆ ಕಿರುಚಿದ್ದಾಳೆ.

ಈ ವೇಳೆ ಗರ್ಭಿಣಿ ಸಹಾಯಕ್ಕೆ ದೈಹಿಕ ಶಿಕ್ಷಕಿ ಶೋಭಾ ಎಂಬುವವರು ಧಾವಿಸಿದ್ದಾರೆ. ತುಂಬು ಗರ್ಭಿಣಿಯ ನೋವಿಗೆ ಸ್ಪಂದಿಸಿದ ಶಿಕ್ಷಕಿ, ಸ್ಥಳದಲ್ಲೇ ಹೆರಿಗೆ ಮಾಡಿಸಲು ಮುಂದಾದರು. ಒಂದು ಗಂಟೆ ಕಾಲ ಹೆರಿಗೆ ನೋವಿನಿಂದ ನರಳಿದ ನಂತರ ಮಗುವಿಗೆ ಜನ್ಮ ನೀಡಿದ್ದಾರೆ.


Spread the love

About Laxminews 24x7

Check Also

ನಮ್ಮ ತಂದೆಯೇ 5 ವರ್ಷ ಸಿಎಂ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಯತೀಂದ್ರ

Spread the loveಮೈಸೂರು: ನಮ್ಮ ತಂದೆಯೇ 5 ವರ್ಷ ಸಿಎಂ. ಖುದ್ದು ಮುಖ್ಯಮಂತ್ರಿಗಳೇ ಅಧಿವೇಶನದಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ