Breaking News

ಪೆಟ್ರೋಲ್‌ ದರ ಏರಿಕೆ ಬೆನ್ನಲ್ಲೇ ಸಿಎನ್‌ಜಿ ದರವೂ ಏರಿಕೆ

Spread the love

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾದ ಬೆನ್ನಲ್ಲೇ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರವನ್ನು 2 ರೂ. ಏರಿಸಲಾಗಿದೆ.

ಪರಿಷ್ಕೃತ ದರ ಇಂದು ಬೆಳಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ದರ 90 ರೂ.ಗೆ ಏರಿಕೆಯಾಗಿದೆ. ವಿವಿಧ ಭಾಗಗಳಲ್ಲಿ ಅಥವಾ ವಿತರಕರ (ಗ್ಯಾಸ್ ಕಂಪನಿಗಳು) ಆಧಾರದ ಮೇಲೆ ಬೆಲೆಯಲ್ಲಿ 0.10 ರಿಂದ 1 ರವರೆಗೆ ವ್ಯತ್ಯಾಸ ಇರಲಿದೆ.

ಆಟೋರಿಕ್ಷಾಗಳು, ಕ್ಯಾಬ್‌ಗಳು ವೆಚ್ಚ ಕಡಿಮೆ ಮಾಡಲು ಸಿಎನ್‌ಜಿ ಬಳಸುತ್ತವೆ. ಸಣ್ಣ ಲಾರಿಗಳು, ಟೆಂಪೋಗಳು ಮತ್ತು ಡೆಲಿವರಿ ವ್ಯಾನ್‌ಗಳು ಸಿಎನ್‌ಜಿ ಇಂಧನ ಬಳಸುತ್ತವೆ. ಸಿಎನ್‌ಜಿ ದರ ಏರಿಕೆಯಿಂದ ಈ ವಾಹನಗಳ ಬಾಡಿಗೆ ಏರಿಕೆಯಾಗಲಿದೆ.


Spread the love

About Laxminews 24x7

Check Also

ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

Spread the loveಬೆಂಗಳೂರು: ಪತಿಗಿಂತ  ಹೆಚ್ಚು ದುಡಿಯುವ ಪತ್ನಿಗೆ  ಜೀವನಾಂಶ ನೀಡಬೇಕಿಲ್ಲ ಎಂದು ನ್ಯಾ. ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ