Home / ರಾಜ್ಯ / ಟಿಪ್ ಟಾಪಾಗಿ ಶರ್ಟ್-ಪ್ಯಾಂಟ್ ತೊಟ್ಟು ಗತ್ತಿನಿಂದ ಹೊರಟ ಆನೆ ನಡಿಗೆಗೆ ಆನಂದ್ ಮಹೀಂದ್ರಾ ಫಿದಾ!

ಟಿಪ್ ಟಾಪಾಗಿ ಶರ್ಟ್-ಪ್ಯಾಂಟ್ ತೊಟ್ಟು ಗತ್ತಿನಿಂದ ಹೊರಟ ಆನೆ ನಡಿಗೆಗೆ ಆನಂದ್ ಮಹೀಂದ್ರಾ ಫಿದಾ!

Spread the love

ನವದೆಹಲಿ : ಮಹೀಂದ್ರಾ ಗ್ರೂಪ್​ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವಿಟ್ಟರ್​ನಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಈ ಬಾರಿ ಅವರು ಟ್ವೀಟ್​ವೊಂದನ್ನು ಮಾಡಿದ್ದು ಅದು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆನಂದ್ ಮಹೀಂದ್ರಾ ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ಹೊಸ ಪೋಸ್ಟ್​ನಲ್ಲಿ ಆನೆಯ ಚಿತ್ರವಿದೆ. ಆದರೆ, ಈ ಚಿತ್ರವನ್ನು ನೋಡಿದ ನಂತರ ನಿಮಗೆ ಒಂದು ಟ್ವಿಸ್ಟ್ ಇದೆ.

ಆನೆಗೆ ಚಡ್ಡಿ ತೊಡಿಸೋಕಾಗುತ್ತಾ ಅನ್ನೋ ಮಾತೊಂದಿದೆ. ಆದರೂ ಕೆಲ ಸರ್ಕಸ್​​ ಕಂಪನಿಗಳಲ್ಲಿ ಆನೆಗಳಿಗೆ ಬಟ್ಟೆ ತೊಡಿಸೋದನ್ನು ನೋಡಿರ್ತಿರಾ. ಆದರೆ, ಮಾವುತನೋರ್ವ ಆನೆಗೆ ಪ್ಯಾಂಟ್​- ಅಂಗಿ ತೊಡಿಸಿಕೊಂಡು ಕರೆದೊಯ್ಯುತ್ತಿರುವ ಫೋಟೋ ನೆಟ್ಟಿಗರ ಮನಗೆದ್ದಿದೆ. ಇನ್​ಕ್ರೆಡಿಬಲ್ ಇಂಡಿಯಾ (ನಂಬಲಾಗದ ಭಾರತ)..

ಎಲೆ-ಪ್ಯಾಂಟ್​ ಎಂದು ಆನಂದ್ ಮಹೀಂದ್ರಾ ತಮ್ಮ ಪೋಸ್ಟ್​​ನಲ್ಲಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ ಆನೆಯ ಚಿತ್ರ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಆನೆ ಕೆನ್ನೇರಳೆ ಶರ್ಟ್ ಮತ್ತು ಕಪ್ಪು ಬಣ್ಣದ ಬೆಲ್ಟ್​ನೊಂದಿಗೆ ಬಿಳಿ ಪ್ಯಾಂಟ್ ಧರಿಸಿದೆ. ಮಹೀಂದ್ರಾ ಅವರ ಈ ಪೋಸ್ಟ್​​ಗೆ 12 ಸಾವಿರಕ್ಕೂ ಅಧಿಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಅಧಿಕ ಜನ ಮರುಪೋಸ್ಟ್​ ಮಾಡಿದ್ದು, ನೂರಾರು ಜನ ಕಮೆಂಟ್ಸ್​ ಮಾಡಿದ್ದಾರೆ.


Spread the love

About Laxminews 24x7

Check Also

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ

Spread the love ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ ಸಿಕ್ಕಿದ್ದು, ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ