Breaking News

ಕುಡಿಯುವ ನೀರಿಗೆ ಹಾಹಾಕಾರ – ಇತಿಹಾಸದಲ್ಲೇ ಮೊದಲ ಬಾರಿ ಔರಾದ್ ಬಂದ್‌ಗೆ ಕರೆ

Spread the love

ಬೀದರ್: ಕುಡಿಯುವ ನೀರಿಗಾಗಿ  ಇಂದು ಇತಿಹಾಸದಲ್ಲೇ ಮೊದಲ ಬಾರಿ ಔರಾದ್  ಬಂದ್‌ಗೆ ಕರೆ ನೀಡಿದ್ದು, ನಾಗರೀಕರ ಸಂಘರ್ಷ ಸಮಿತಿಯಿಂದ ಇಂದು ಔರಾದ್ ಬಂದ್‌ಗೆ ಕರೆ ನೀಡಲಾಗಿದೆ.

ಈಗಾಗಲೇ ಔರಾದ್ ಪಟ್ಟಣದಲ್ಲಿರುವ ಅಂಗಡಿ-ಮುಗ್ಗಟ್ಟುಗಳು, ಬೀದಿ ಬದಿಯ ವ್ಯಾಪಾರಸ್ಥರು ಆಟೋ, ಹೋಟೆಲ್‌ಗಳು ಬಂದ್ ಮಾಡಿದ್ದು ಎಲ್ಲರು ಇಂದಿನ ಔರಾದ್ ಬಂದ್‌ಗೆ ಬೆಂಬಲ ನೀಡಿದ್ದಾರೆ. ಎರಡು ತಿಂಗಳಿನಿಂದ ಔರಾದ್ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ಹನಿ ನೀರಿಗೆ ಹಾಹಾಕಾರ ಶುರುವಾಗಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ನೀರಿನ ಸಮಸ್ಯೆ ಬಗೆಹರಿಸದ ಹಿನ್ನೆಲೆ ಇಂದು ಬಂದ್‌ಗೆ ಕರೆ ನೀಡಲಾಗಿದೆ.

10:30ಕ್ಕೆ ಔರಾದ್ ಪಟ್ಟಣದಲ್ಲಿ ನೀರಿಗಾಗಿ ಮಹಿಳೆಯರು ಕೊಡಗಳನ್ನು ಹಿಡಿದುಕೊಂಡು ಬೃಹತ್ ಪ್ರತಿಭಟನಾ ರ‍್ಯಾಲಿ ಮಾಡಲಿದ್ದು, ಔರಾದ್ ನಾಗರೀಕ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಮಾಡಲಿದ್ದಾರೆ. ಬಂದ್ ಹಿನ್ನೆಲೆ ಔರಾದ್ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪಟ್ಟಣದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ.


Spread the love

About Laxminews 24x7

Check Also

ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ

Spread the loveಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್  ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ