Breaking News
Home / ರಾಜ್ಯ / ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಸಾಮಾನ್ಯರಿಗೂ ಸಿಗಲಿದೆ ಐಷಾರಾಮಿ ಪ್ರಯಾಣ

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ : ಸಾಮಾನ್ಯರಿಗೂ ಸಿಗಲಿದೆ ಐಷಾರಾಮಿ ಪ್ರಯಾಣ

Spread the love

ನವದೆಹಲಿ: ಕಪುರ್ಥಾಲಾದ ರೈಲು ಕೋಚ್ ಕಾರ್ಖಾನೆ ಜನರಲ್‌ ಬೋಗಿಗಳಿಗೂ ಹವಾನಿಯಂತ್ರಿತ (ಎಸಿ) ತಯಾರಿಸಲು ಪ್ರಾರಂಭಿಸಿದೆ ಎನ್ನಲಾಗಿದೆ. ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೋಗಿಗಳು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ ಅಂತ ತಿಳಿದು ಬಂದಿದೆ.

ನಾಗ್ಡಾ-ಕೋಟಾ-ಸವಾಯಿ ಮಾಧೋಪುರ ವಿಭಾಗದಲ್ಲಿ 180 ಕಿ.ಮೀ ವೇಗದಲ್ಲಿ ಯಶಸ್ವಿ ಪ್ರಯೋಗಗಳ ನಂತರ ಎಸಿ 3-ಹಂತದ ಸಾಮಾನ್ಯ ಬೋಗಿಗಳನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ. ಭಾರತೀಯ ರೈಲ್ವೆಯ ಪಂಜಾಬ್ ಮೂಲದ ಕೋಚ್ ತಯಾರಿಕಾ ಘಟಕವು ಮೊದಲ ಪ್ರೋಟೊಟೈಪ್ ಎಕಾನಮಿ ಕ್ಲಾಸ್ ಹವಾನಿಯಂತ್ರಿತ ಮೂರು ಬೋಗಿಯನ್ನು ಫೆಬ್ರವರಿ 10ರಂದು ಬಿಡುಗಡೆ ಮಾಡಿತು. ನಂತರ ಅದನ್ನು ಸಂಶೋಧನೆ ಅಭಿವೃದ್ಧಿ ಮತ್ತು ಪ್ರಮಾಣಿತ ಸಂಸ್ಥೆಗೆ (ಆರ್ ಡಿಎಸ್ ಒ) ತನ್ನ ಪ್ರಯೋಗಗಳಿಗಾಗಿ ಹಸ್ತಾಂತರಿಸಿದೆ.

ಆರ್ ಡಿಎಸ್ ಒ ನಡೆಸಿದ ಮೂರು ವಾರಗಳ ಪ್ರಯೋಗಗಳ ಯಶಸ್ವಿಯಾಗಿದೆ ಎಂದು ಆರ್ ಸಿಎಫ್ ಜನರಲ್ ಮ್ಯಾನೇಜರ್ ರವೀಂದರ್ ಗುಪ್ತಾ ತಿಳಿಸಿದ್ದಾರೆ. ಈಗ ಅಂತಹ 248 ಬೋಗಿಗಳನ್ನು ತಯಾರಿಸುವ ಆದೇಶ ಬಂದಿದೆ ಎಂದು ಅವರು ತಿಳಿಸಿದ್ದು, ಆರ್ ಸಿಎಫ್, ಕಪುರ್ಥಾಲಾ ಮಾರ್ಚ್ ಅಂತ್ಯದ ವೇಳೆಗೆ 50 ಬೋಗಿಗಳನ್ನು ಹೊರತರಲಿದ್ದು, ಉಳಿದ ವುಗಳನ್ನು ಮುಂದಿನ ಹಣಕಾಸು ವರ್ಷದಲ್ಲಿ ಉತ್ಪಾದಿಸಲಾಗುವುದು ಅಂತ ಹೇಳಿದ್ದಾರೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ