Breaking News
Home / Uncategorized / ಡ್ರಗ್ಸ್‌ ಜೊತೆ ಸಿಕ್ಕಿಬಿದ್ದ ಪ್ರಕರಣ; ಸಿಐಡಿ ತನಿಖೆಗೆ ಪಮೇಲಾ ಗೋಸ್ವಾಮಿ ಒತ್ತಾಯ

ಡ್ರಗ್ಸ್‌ ಜೊತೆ ಸಿಕ್ಕಿಬಿದ್ದ ಪ್ರಕರಣ; ಸಿಐಡಿ ತನಿಖೆಗೆ ಪಮೇಲಾ ಗೋಸ್ವಾಮಿ ಒತ್ತಾಯ

Spread the love

ಕೋಲ್ಕತ್ತಾ, ಫೆಬ್ರವರಿ 20: ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ನಾಯಕಿ ಪಮೇಲಾ ಗೋಸ್ವಾಮಿ, ಮಾದಕವಸ್ತುವಿನ ಸಮೇತ ಶುಕ್ರವಾರ ಸಿಕ್ಕಿಬಿದ್ದಿದ್ದು, ಕಾರ್‌ನಲ್ಲಿದ್ದ ಸುಮಾರು 10 ಲಕ್ಷ ರೂ ಮೌಲ್ಯದ 90 ಗ್ರಾಂ ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಪಮೇಲಾ ಗೋಸ್ವಾಮಿ ಅವರನ್ನು ಶನಿವಾರ ಕೋಲ್ಕತ್ತಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ.

ಈ ಸಂದರ್ಭ ಮಾತನಾಡಿರುವ ಪಮೇಲಾ ಗೋಸ್ವಾಮಿ, “ಇದು ನನ್ನ ವಿರುದ್ಧದ ಸಂಚು. ಇದರಲ್ಲಿ ಪಕ್ಷದ ಸಹೋದ್ಯೋಗಿ ಹಾಗೂ ಕೈಲಾಶ್ ವಿಜಯ ವರ್ಗಿಯಾ ಸಹಾಯಕ ರಾಕೇಶ್ ಸಿಂಗ್ ಹುನ್ನಾರವಿದೆ. ಅವರೇ ಕಾರಿನಲ್ಲಿ ಕೊಕೇನ್‌ಗಳನ್ನು ಇರಿಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಐದು ದಿನಗಳ ಹಿಂದೆ ಮಾತನಾಡಿದ ಆಡಿಯೋ ಕೂಡ ನನ್ನ ಬಳಿ ಇದೆ” ಎಂದು ತಿಳಿಸಿದ್ದಾರೆ. ಜೊತೆಗೆ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.

ಆದರೆ ಪಮೇಲಾ ಗೋಸ್ವಾಮಿ ಅವರ ಈ ಆರೋಪವನ್ನು ಅಲ್ಲಗಳೆದಿರುವ ರಾಕೇಶ್ ಸಿಂಗ್, “ದೂರು ನೀಡುವುದು ಬಹಳ ಸುಲಭ. ಆದರೆ ಅದನ್ನು ಸಾಬೀತುಪಡಿಸುವುದು ಕಷ್ಟ. ಅವರು ಏಕೆ ನನ್ನ ಹೆಸರನ್ನು ಈ ಪ್ರಕರಣದಲ್ಲಿ ತಂದರು ಎಂದು ಅವರೇ ಹೇಳಬೇಕು. ಇದು ನನಗೆ ಅಪಖ್ಯಾತಿ ತರುವ ಹುನ್ನಾರವಷ್ಟೆ. ಇಂಥ ಕೆಟ್ಟ ರಾಜಕೀಯವನ್ನು ನಾನು ನಂಬುವುದಿಲ್ಲ” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಪಮೇಲಾ, 2019ರಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಪಮೇಲಾ ಅವರನ್ನು ಅವರ ಸ್ನೇಹಿತ ಪ್ರಬೀರ್ ಕುಮಾರ್ ದೇ ಮತ್ತು ಸೆಕ್ಯುರಿಟಿ ಗಾರ್ಡ್ ಒಬ್ಬರ ಜತೆ ಶುಕ್ರವಾರ ಬಂಧಿಸಲಾಗಿತ್ತು. ಅವರ ಕಾರ್‌ನಲ್ಲಿ ಸುಮಾರು 10 ಲಕ್ಷ ರೂ ಮೌಲ್ಯದ 90 ಗ್ರಾಂ ಕೊಕೇನ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದರು.

ಪಮೇಲಾ ಅವರು ಸ್ಥಳವೊಂದಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದರು. ಅವರ ಚಲನವಲನಗಳನ್ನು ಗಮನಿಸಿದ್ದ ಪೊಲೀಸರು, ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದಾಗ ಅವರ ಕಾರ್‌ನಲ್ಲಿ ಕೊಕೇನ್ ದೊರಕಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ