Breaking News

ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ SIT ರಚನೆ: ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಫಾರ್ಮ್-7 ದುರ್ಬಳಕೆ ಬಗ್ಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಫಾರ್ಮ್-7 ಸಂಬಂಧ ರಾಜ್ಯದಲ್ಲಿ ದೂರು ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯ ಖಾಸಗಿಯಾಗಿ ದೂರುಗಳನ್ನು ನೀಡಲಾಗುತ್ತಿದೆ. ಸತ್ತು ಹೋಗಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗುತ್ತಿದೆ. ಆ ದೂರುಗಳನ್ನು ನಾವು ತೆಗೆದುಕೊಳ್ಳಬಾರದಾ? ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಈ ಅರ್ಜಿಗಳನ್ನು ನೀಡುತ್ತಿದ್ದಾರೆ. ವಿಜಯಪುರದಲ್ಲಿ ಅನೇಕ ಜನರು ‘ನಾವು ಬದುಕಿದ್ದೇವೆ’ ಎಂದು ದೂರು ನೀಡಿದ್ದಾರೆ. ಅದಕ್ಕೆ ದೂರು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ಕಾನೂನು ಉಲ್ಲಂಘನೆಯಾದರೆ ಸನ್ಮಾನ ಮಾಡಬೇಕಾ? ರಾಜ್ಯೋತ್ಸವ ಕೊಡಬೇಕಾ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಡಿಸಿಗಳಿಂದ ದೂರು ಬಂದ ಬಳಿಕ SIT ಬಗ್ಗೆ ತೀರ್ಮಾನ
SIT ರಚನೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಖಾಸಗಿ ದೂರುಗಳ ಬಗ್ಗೆ ಪರಿಶೀಲನೆ ಮಾಡೋಣ. ಡಿಸಿಗಳು ಈಗಾಗಲೇ ಪರಿಶೀಲನೆ ಮಾಡುತ್ತಿದ್ದಾರೆ. ಡಿಸಿಗಳ ಮೂಲಕ ಚುನಾವಣಾ ಆಯೋಗಕ್ಕೆ ದೂರು ಬರಲಿ. ದೂರು ಬಂದಾಗ ಅದರ ಬಗ್ಗೆ ನೋಡೋಣ ಎಂದು ಹೇಳಿದರು.

ಇದು ದೊಡ್ಡ ಅಕ್ರಮ. ಕೇಂದ್ರ ಸರ್ಕಾರ ಮಾಡುತ್ತಿರುವುದು ಇದು. ಇಡೀ ದೇಶದಲ್ಲಿ ಇದು ನಡೆಯುತ್ತಿದೆ. ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಮನಸ್ಸಿಗೆ ಬಂದ ಹಾಗೆ ಕೇಸ್ ಹಾಕಲು ಆಗುವುದಿಲ್ಲ. ದೂರು ಕೊಟ್ಟರೆ ಮಾತ್ರ ಕೇಸ್ ಹಾಕಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು.

ಜಿಎಸ್‌ಟಿ ಸಭೆಯಲ್ಲಿ ಭಾಗಿಯಾಗಲು ಸಿಎಂ ದೆಹಲಿಗೆ
ಸಿಎಂ ಅವರು ಜಿಎಸ್‌ಟಿ ಸಭೆಗಾಗಿ ದೆಹಲಿಗೆ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ಬೈರೇಗೌಡರನ್ನು ಕಳುಹಿಸುತ್ತಿದ್ದರು. ಈಗ ಸಿಎಂ ಡಿ.ಕೆ ಶಿವಕುಮಾರ್‌ ಅವರೇ ಹೋಗುತ್ತಿದ್ದಾರೆ. ಹೆಚ್ಚಿನ ಮಾಹಿತಿ ಪಡೆಯಲು ಹೋಗುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಜಿಎಸ್‌ಟಿ ವಿಚಾರ ಅಷ್ಟೇ ಅಲ್ಲ. 16ನೇ ಹಣಕಾಸು ಆಯೋಗದ ಬಗ್ಗೆಯೂ ಸ್ಪಷ್ಟನೆ ಬೇಕಿದೆ. ಬರ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ಮನವಿ ಮಾಡಿದ್ದೇವೆ. ಇನ್ನೂ ಗ್ರೌಂಡ್ ಟ್ರೂಥಿಂಗ್ ಕೂಡ ನಡೆಯುತ್ತಿದೆ. ಎಲ್ಲಾ ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಬೇಕಿದೆ. ಹೀಗಾಗಿ ನಾಳೆ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ರಾಜ್ಯದಲ್ಲಿ ಭೀಕರ ಬರ 46 ಸಾವಿರ ಕೋಟಿ ನಷ್ಟ, ಈ ವರ್ಷ ಜಿಎಸ್‌ಟಿ ಸಂಗ್ರಹ ಕುಸಿತ: ಜಿ. ಪರಮೇಶ್ವರ್‌

Spread the loveಬೆಂಗಳೂರು: ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ