Breaking News

ಕೆಬಿಸಿಯಲ್ಲಿ ಕೋಟಿ ಗೆದ್ದ ವೈದ್ಯೆ

Spread the love

ನವದೆಹಲಿ, ಜ.8- ಬಾಲಿವುಡ್‍ನ ಬಿಗ್‍ಬಿ ಅಮಿತಾಬ್‍ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೆಗಾ ಕರೋಡ್‍ಪತಿಯಲ್ಲಿ ವೈದ್ಯೆಯೊಬ್ಬರು ಕೋಟಿ ಗೆದ್ದು ಸಂಭ್ರಮಿಸಿದ್ದಾರೆ. ಕೆಬಿಸಿ 12ರಲ್ಲಿ ಕೋಟಿ ಗೆಲ್ಲುತ್ತಿರುವ ನಾಲ್ಕನೇ ಸ್ಪರ್ಧಿಯಾಗಿ ಮುಂಬೈನ ಡಾ.ನೇಹಾ ಶಾ ಅವರು ಹೊರಹೊಮ್ಮಿದ್ದಾರೆ. ಜನಸೇವೆಯೇ ತನ್ನ ಧ್ಯೇಯ ಎಂಬ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ನೇಹಾ ಅವರು ಲಾಕ್‍ಡೌನ್ ವೇಳೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುವ ಮೂಲಕವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ತಮ್ಮ ಬುದ್ಧಿಶಕ್ತಿ, ಸಮಯ ಪಾಲನೆ ಹಾಗೂ ಲೈಫ್‍ಲೈನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕೋಟಿ ಗೆದ್ದ ನೇಹಾ ಮುಂದೆ 7 ಕೋಟಿ ರೂ. ಗೆಲ್ಲುವ ಪ್ರಶ್ನೆಯಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ 1972ರಲ್ಲಿ ಭಾರತೀಯ ಪ್ರಧಾನಿ ಇಂದಿರಾಗಾಂಧಿ ಹಾಗೂ ಪಾಕ್ ಪ್ರಧಾನಿ ಜುಲ್ಫಿಕರ್ ಆಲಿ ಬುಟ್ಟೋ ನಡುವೆ ಶಿಮ್ಲಾದ ಯಾವ ಪ್ರದೇಶದಲ್ಲಿ ಐತಿಹಾಸಿಕ ಮಾತುಕತೆ ನಡೆದಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ನೇಹಾ ಕೋಟಿ ರೂ.ಗೆ ತೃಪ್ತಿ ಪಟ್ಟುಕೊಂಡರು.


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ