Breaking News
Home / Uncategorized / ಫಾಸ್ ಟ್ಯಾಗ್ ಬಳಕೆದಾರರಿಗೆ ಕ್ಯಾಷ್‌ಬ್ಯಾಕ್

ಫಾಸ್ ಟ್ಯಾಗ್ ಬಳಕೆದಾರರಿಗೆ ಕ್ಯಾಷ್‌ಬ್ಯಾಕ್

Spread the love

ಮುಂಬೈ, ಜ.8-ಫಾಸ್ ಟ್ಯಾಗ್ ಯೋಜನೆಯಲ್ಲಿ ಟೋಲ್ ಹಣ ಪಾವತಿಸುವ ವಾಹನ ಮಾಲೀಕರಿಗೆ ಜ.11 ರಿಂದ ಸಿಹಿ ಸುದ್ದಿ ಸಿಗಲಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಟೋಲ್ ಹಾಗೂ ಬಾಂದ್ರಾ-ವೋರ್ಲಿ  ಸೀಲಿಂಕ್ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ಹಾದು ಹೋಗುವ ವಾಹನ ಮಾಲೀಕರ ಖಾತೆಗೆಶೇ.5 ರಷ್ಟು ಹಣ ಕ್ಯಾಷ್‌ ಬ್ಯಾಕ್ ರೂಪದಲ್ಲಿ ಅವರ ಖಾತೆಗೆ ಜಮೆಆಗಲಿದೆ ಎಂದು ಮಹಾರಾಷ್ಟ್ರ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ) ಪ್ರಕಟಿಸಿದೆ.

ಕ್ಯಾಷ್‌ಬ್ಯಾಕ್‌ ಯೋಜನೆಯಿಂದ ಈ ಟೋಲ್‌ಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಸಾಧ್ಯತೆ ಇದೆ. ಈ ಸ್ಕೀಂಗೆ ಕಾರುಗಳು, ಜೀಪುಗಳು ಹಾಗೂ ಎಸ್‌ಯುವಿ ವಾಹನಗಳು ಮಾತ್ರ ಒಳಗೊಂಡಿದ್ದು, ಕ್ಯಾಷ್‌ಬ್ಯಾಕ್‌ ಯೋಜನೆ ಸೀಮಿತಿ ಅವಧಿ ಮಾತ್ರ ಇರಲಿದೆ ಎಂದು ನಿಗಮ ತಿಳಿಸಿದೆ.

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಟಿ ತಂತ್ರಜ್ಞಾನದ ಈ ಫಾಸ್ ಟ್ಯಾಗ್ ‌ಕಾರ್ಯಕ್ರಮದಿಂದ ಟೋಲ್ ‌ಪ್ಲಾಜಾಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ವಾಹನಗಳು ಸುಗಮವಾಗಿ ಹಾದುಹೋಗಲಿವೆ. ಅದಕ್ಕಾಗಿಯೇ ಫಾಸ್ ಟ್ಯಾಗ್ ಲಿಂಕ್ಡ್ ‌ಡಿಜಿಟಲ್ ಬ್ಯಾಂಕ್ ಪಾವತಿ ಪದ್ಧತಿಯನ್ನು ಅಳವಡಿಸಲಾಗಿದೆ.

ಪ್ರತಿ ಬಾರಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಬಾಂದ್ರಾ-ವೋರ್ಲಿ ಸೀಲಿಂಕ್ ಮೂಲಕ ಹಾದು ಹೋಗುವ ವಾಹನಗಳ ನೋಂದಾಯಿತ ಮಾಲೀಕರು ಮಾತ್ರ ಜ.11 ರಿಂದಶೇ.5 ರಷ್ಟುಕ್ಯಾಷ್‌ಬ್ಯಾಕ್‌ ಯೋಜನೆಯ ಲಾಭ ಪಡೆಯಲಿದ್ದಾರೆಎಂದು ಎಂಎಸ್‌ಆರ್‌ಡಿಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ವಾಗ್ಮರೆ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಫಾಸ್ ಟ್ಯಾಗ್ ವ್ಯವಸ್ಥೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲುರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಂಎಸ್‌ಆರ್‌ಡಿಸಿಯನ್ನು ನೋಡೆಲ್ ‌ಏಜೆನ್ಸಿಯಾಗಿ ನೇಮಿಸಿದೆ.


Spread the love

About Laxminews 24x7

Check Also

ಚುನಾವಣೆ ಚೆಕಿಂಗ್; ದಾಖಲೆ ಇಲ್ಲದ 20 ಲಕ್ಷಕ್ಕೂ ಅಧಿಕ ವಶ.!

Spread the love ಚಿತ್ರದುರ್ಗ; ಚಿತ್ರದುರ್ಗದಲ್ಲಿ ವಾಹನ ಒಂದರಲ್ಲಿ ವ್ಯಕ್ತಿಯೊಬ್ಬರು ದಾಖಲೆ ಇಲ್ಲದೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ