Breaking News

ಇಂಜಿನಿಯರ್​​​ ವಿದ್ಯಾರ್ಥಿಗಳೇ ಮಾಡಿದ ಮಾದರಿ ವಿಮಾನಗಳ ಏರ್​​ ಶೋ: ಸಹ್ಯಾದ್ರಿ ಗ್ರೌಂಡ್​ನ​ ಬಾನಲ್ಲಿ ಹಾರಾಡಿದ ಲೋಹದ ಹಕ್ಕಿಗಳು

Spread the love

ಮಂಗಳೂರು(ದಕ್ಷಿಣ ಕನ್ನಡ): ವಿಮಾನ ತಯಾರಿ ಬಲು ಕ್ಲಿಷ್ಟ ಕಾರ್ಯ. ಅಂತಹುದರಲ್ಲಿ ಮಂಗಳೂರಿನ ಸಹ್ಯಾದ್ರಿ ಇಂಜಿನಿ ಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಮಾನದ ಮಾದರಿ ತಯಾರಿಸಿ ಅದನ್ನು ಹಾರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಗ್ರೌಂಡ್​ನಲ್ಲಿ ಇಂದು ನಡೆದ ಏರ್ ಶೋದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕ್ಷಣಮಾತ್ರದಲ್ಲೇ ನೆಲದಿಂದ ರೊಂಯ್ಯನೇ ಬಾನೆತ್ತರಕ್ಕೆ ಹಾರಿದ ಲೋಹದ ಹಕ್ಕಿಗಳು. ಬಾನಾಡಿಗಳಂತೆ ಆಕಾಶದಲ್ಲಿ ಹಾರಾಡಿ ನೆರೆದಿರುವವರ ಕಣ್ಣುಗಳಿಗೇ ಸವಾಲೆಸೆದು ತನ್ನತ್ತ ಸೆಳೆಯುತ್ತಿತ್ತು. ಒಂದಷ್ಟು ಹೊತ್ತು ಗಾಳಿಯಲ್ಲಿ ತೇಲಾಡುತ್ತಾ ಮತ್ತೆ ನೆಲಕ್ಕೆ ಧುಮುಕುತ್ತಿತ್ತು. ಇವು ವಿದ್ಯಾರ್ಥಿಗಳೇ ರಚಿಸಿದ ಮಾದರಿ ವಿಮಾನದ ಹಾರಾಟದ ನೋಟ.

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಿನರ್ಜಿಯಾ-2025ರ ಅಂಗವಾಗಿ ನಡೆದ ರೋಮಾಂಚಕಾರಿ ಏರೋಫಿಲಿಯಾ ಏರ್ ಶೋದಲ್ಲಿ ಈ ದೃಶ್ಯ ಕಂಡುಬಂತು. ಈ ಏರ್ ಶೋನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹೊರಗಿನವರಿಂದ ತಯಾರಿಸಲ್ಪಟ್ಟ ಸುಮಾರು 10 ವಿಮಾನಗಳು ಹಾರಾಟ ನಡೆಸಿತ್ತು. ಇದರಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳೇ 7 ವಿಮಾನಗಳು ತಯಾರಿಸಿ, ಹಾರಿಸಿದ್ದಾರೆ. ಫ್ಲೈಟ್ ತಯಾರಿ, ಪೈಲಟ್ ತಯಾರಿ ಸೇರಿದಂತೆ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಈ ಏರ್​ ಶೋಗೆ ತಯಾರಿ ನಡೆಸಿದ್ದಾರೆ.

ಈ ಏರ್​ ಶೋನಲ್ಲಿ ನಾಲ್ಕು ಪೈಲಟ್​ ಜೆಟ್ಸ್​ ಅಂದರೆ ಎಫ್-22 ರ್ಯಾಪಿಡ್ ಅಮೆರಿಕ ರೆಪ್ಲಿಕಾ ಮಾದರಿಯ ವಿಮಾನಗಳು, ಮೂರು ಜೂನಿಯರ್ ವಿದ್ಯಾರ್ಥಿಗಳಿಗಾಗಿ ತಯಾರಿಸಿದ ವಿಮಾನಗಳು. ಇನ್ನೊಂದು ಡ್ರೋನ್ ಹಾರಿಸಲಾಗಿದೆ. ಜೊತೆಗೆ ಎಫ್ಟಿವಿ ರೇಸಿಂಗ್ ಹಾಗೂ ಯುದ್ಧ ವಿಮಾನ ಮಾದರಿಯನ್ನು ಹಾರಿಸಲಾಗಿದೆ. ಉಳಿದ ಮೂರು ವಿಮಾನಗಳು ಹೊರಗಿನಿಂದ ಬಂದವು.

ರಂಜಿತ್​, ಸಮೃದ್​ ಸಾಲಿಮ್​, ಪ್ರಥಮ್​​, ಸನತ್​​, ಯಶಸ್ ಸೇರಿದಂತೆ ಸಹ್ಯಾದ್ರಿ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳೇ ಪೈಲಟ್​ಗಳಾಗಿ ವಿಮಾನ ಹಾರಿಸಿದ್ದಾರೆ. ಸಿನರ್ಜಿಯಾ-2025ರ ಅಂಗವಾಗಿ ವಿವಿಧ ಶಾಲೆಗಳ ಹೈಸ್ಕೂಲ್ ಮಕ್ಕಳಿಂದ ಪ್ರಾಜೆಕ್ಟ್​ಗಳ ಪ್ರದರ್ಶನ ಆಯೋಜಿಸಲಾಗಿದೆ. ಈ ಮಕ್ಕಳಲ್ಲೂ ವಿಜ್ಞಾನ – ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹ್ಯಾದ್ರಿ ಕಾಲೇಜು ಏರ್​ ಶೋವನ್ನು ಆಯೋಜಿಸಿದೆ. ಒಟ್ಟಿನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಈ ಏರ್​ ಶೋ ಸಾಹಸವನ್ನು ನೆರೆದಿದ್ದವರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಸಿನಾರ್ಜಿಯ ಕಾರ್ಯಕ್ರಮ ಉಸ್ತುವಾರಿ, ವಿದ್ಯಾರ್ಥಿನಿ ಜೀವಿತಾ ಮಾತನಾಡಿ, “ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಏಳು ವಿಮಾನದ ಮಾದರಿಯನ್ನು ಮಾಡಿ ಹಾರಿಸಿದ್ದಾರೆ. ವಿದ್ಯಾರ್ಥಿಗಳು ಇದನ್ನು ಬಳಸಿದ ವಸ್ತುಗಳ ಮೂಲಕ ತಯಾರಿಸಿದ್ದಾರೆ” ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ