Breaking News

ಪ್ರತಿ ವರ್ಷದಂತೆ ಈ‌ ಬಾರಿಯೂ 15ನೇ ಆವೃತ್ತಿಯ ಹಾಫ್ ಮ್ಯಾರಾಥಾನ್: ರೋಟರಿ ಕ್ಲಬ್

Spread the love

ಬೆಳಗಾವಿಬೆಳಗಾವಿಯ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ವತಿಯಿಂದ ಪ್ರತಿ ವರ್ಷದಂತೆ ಈ‌ ಬಾರಿಯೂ 15ನೇ ಆವೃತ್ತಿಯ ಹಾಫ್ ಮ್ಯಾರಾಥಾನ್ ಅನ್ನು ನ.16 ರಂದು ಕೆಎಲ್ಇ ಲಿಂಗರಾಜ್ ಕಾಲೇಜಿನ ಆವರಣದಿಂದ ಆರಂಭವಾಗಲಿದೆ ಎಂದು ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ಅಧ್ಯಕ್ಷ ಶಶಿಕಾಂತ ನಾಯಕ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ವರ್ಷ ನಮ್ಮ ಸಂಸ್ಥೆ ಅತ್ಯುತ್ತಮವಾಗಿ ಮ್ಯಾರಥಾನ್ ಆಯೋಜಿಸಲಾಗಿ ಬರುತ್ತದೆ. ನ.16 ರಂದು ನಡೆಯಲಿರುವ ಹಾಫ್ ಮ್ಯಾರಥಾನ್ ಕೆಎಲ್ಇ ಲಿಂಗರಾಜ್ ಕಾಲೇಜಿನ ಆವರಣದಿಂದ ಕ್ಯಾಂಪ್, ಸಾವಗಾವ ರೋಡ್ ಪ್ರದೇಶ ಸೇರಿದಂತೆ ನಗರದ ವಿವಿಧ ಪ್ರದೇಶದಲ್ಲಿ ನಡೆಯಲಿದೆ ಎಂದರು.
ಈ ಮ್ಯಾರಥಾನ್ ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಓಟಗಾರರು ಭಾಗಿಯಾಗಿ 21 ಕಿ.ಮೀ, 10 ಕಿ.ಮೀ, 5ಕಿ.ಮೀ ಹಾಗೂ 3 ಕಿ.ಮೀ ಫನ್ ರನ್ ಮ್ಯಾರಾಥಾನ್ ನಲ್ಲಿ ಭಾಗಿಯಾಗಲಿದ್ದಾರೆ. ಮ್ಯಾರಾಥಾನ್ ವಿಜೇತರಿಗೆ ಸುವರ್ಣ ನಾಣ್ಯ ಬಹುಮಾನವಾಗಿ ನೀಡಲಾಗುವುದು ಎಂದರು.
ನ.13 ಹಾಗೂ ನ.14ರಂದು ಮಿಲೇನಿಯಂ ಗಾರ್ಡನ್ ನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಎಕ್ಸಪೋವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೋಸ್೯ಗಳು, ಮಕ್ಕಳಿಗಾಗಿ ಆಟ, ಮನರಂಜನೆ ಮತ್ತು ಚರ್ಚಾ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ವೈಶಾಲಿ ಸಾಗರೆ ಮಾತನಾಡಿ, ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ವತಿಯಿಂದ ಆಯೋಜಿಸಲಾದ ಹಾಫ್ ಮ್ಯಾರಾಥಾನ್ ಪ್ರಾಯೋಜಕತ್ವವನ್ನು ವಿಜಯಾ ಲೇಬ್ಸ್ ಮತ್ತು ಟೀ ಟೋಸ್ಟಾ ಮತ್ತು ಕಂಪನಿ ವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕು ಎಂದು ಕರೆ ನೀಡಿದರು‌.
ಲೋಕೇಶ್ ಹೊಂಗಲ, ವೈಶಾಲಿ ಸಾಗರೆ, ಸಚಿನ ಕುಲಗೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ