Breaking News

ಶ್ರೀಲಂಕಾದಿಂದ ಅಕ್ರಮವಾಗಿ ವಲಸೆ ಬಂದ ಮೂವರು ವಲಸಿಗರುಪೊಲೀಸ್ ವಶಕ್ಕೆ

Spread the love

ಬೆಂಗಳೂರು, ಸೆಪ್ಟೆಂಬರ್ 29: ವಿದೇಶೀಯರು ಅಕ್ರಮವಾಗಿ ಬೆಂಗಳೂರಿಗೆ (Bengaluru) ಬಂದು ನೆಲಸುವ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಶ್ರಿಲಂಕಾದಿಂದ ಬಂದ ಮೂವರು ಅಕ್ರಮ ವಲಸಿಗರನ್ನು (Illegal Immigrants) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದಿದ್ದ ಅಕ್ರಮ ವಲಸಿಗರನ್ನು ಕೆಲವು ತಿಂಗಳ ಹಿಂದೆ ಬಂಧಿಸಲಾಗಿತ್ತು. ಈಗ ಶ್ರೀಲಂಕಾ ಅಕ್ರಮ ವಲಸಿಗರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದೇಶಿಗರು ಅಕ್ರಮವಾಗಿ ಬೆಂಗಳೂರಿಗೆ ಬಂದಿದ್ದು ಹೇಗೆ?

ಶ್ರೀಲಂಕಾದಿಂದ ಅಕ್ರಮವಾಗಿ ವಲಸೆ ಬಂದ ಮೂವರು ಬೆಂಗಳೂರಿನ ದೇವನಹಳ್ಳಿ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಿದ್ದರು. ಶ್ರೀಲಂಕಾದ ಜಾಫ್ನಾದಿಂದ ಬೋಟ್​ ಮೂಲಕ ತಮಿಳುನಾಡಿಗೆ ಬಂದಿಳಿದ ವಿದೇಶೀಯರು,  ಅಲ್ಲಿಂದ ರಾಮೇಶ್ವರಂಗೆ ಹೋಗಿದ್ದರು. ಮೂವರು ಶ್ರೀಲಂಕಾದ ಪ್ರಜೆಗಳೂ ಸ್ಥಳೀಯ ವ್ಯಕ್ತಿಯೊಬ್ಬನ ಸಹಾಯ ಪಡೆದು ಬೆಂಗಳೂರಿಗೆ ಬಂದು, ಅಕ್ರಮವಾಗಿ ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.

ಕಳೆದ ಒಂದು ವರ್ಷದಿಂದ ಪಾಸ್​ಪೋರ್ಟ್​ ಮತ್ತು ವೀಸಾವಿಲ್ಲದೆಯೇ ಇಲ್ಲಿ ಉಳಿದಿದ್ದರು. ವಿದೇಶಿ ಪ್ರಜೆಗಳು ನೆಲೆಸಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿತ್ತು. ಬೆಂಗಳೂರಿನ ಸಿಸಿಬಿ ಠಾಣೆಯಲ್ಲಿ ಫಾರಿನ್ ಆ್ಯಕ್ಟ್ ಅಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಮೂವರೂ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಡೀಲರ್ಸ್ ಎಂಬ ಮಾಹಿತಿ ಲಭ್ಯವಾಗಿದ್ದು, ಓರ್ವ ಆರೋಪಿ ವಿರುದ್ಧ ಎನ್​ಸಿಬಿ ಕೇಸ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸಧ್ಯಕ್ಕೆ  ಶ್ರೀಲಂಕಾದ ರಾಯಭಾರಿ ಕಚೇರಿಗೆ ಸಿಸಿಬಿ ಈ ಬಗ್ಗೆ ಮಾಹಿತಿ ಕಳುಹಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ