ಸೆ.19ರಂದು ಬಿಡುಗಡೆಯಾಗುತ್ತಿರುವ ಜೊತೆಯಾಗಿ ಹಿತವಾಗಿ – ನಟ ಅಗಸ್ತ್ಯ ಪ್ರೇಕ್ಷಕರ ಬೆಂಬಲ ಕೋರಿಕೆ |
ಕನ್ನಡ ಚಲನಚಿತ್ರದಲ್ಲಿ ಬೆಳೆಯಲು ಸಾಕಷ್ಟು ಕಷ್ಟ ಇದೆ. ಇದೇ ಸೆ.19 ರಂದು ರಾಜ್ಯಾದ್ಯಂತ ಜೊತೆಯಾಗಿ ಹಿತವಾಗಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ನಟ ಅಗಸ್ತ್ಯ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕದ ಚಲನಚಿತ್ರ ಎಂದರೆ ಬೇರೆ ದೃಷ್ಟಿಕೋನದಿಂದ ನೋಡುತ್ತಾರೆ. ಜೊತೆಯಾಗಿ ಹಿತವಾಗಿ ಕನ್ನಡ ಚಲನಚಿತ್ರ ತಂದೆ, ಮಗನ ಬಾಂಧವ್ಯದ ಕುರಿತು ಹಾಗೂ ಪ್ರೀತಿಗೆ ಪೂರಕವಾದ ಸಿನಿಮಾ ಮಾಡಿದ್ದೇವೆ. ಎಲ್ಲರೂ ನೋಡಿ ಸಹಕರಿಸಬೇಕು ಎಂದರು.
ಈ ಸಿನಿಮಾ ಮಾಡಲು ನಮ್ಮ ಸಿನಿಮಾ ಸಾಕಷ್ಟು ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಬಹುತೇಕ ಬೆಳಗಾವಿಯ ಸುತ್ತಮುತ್ತಲಿನಲ್ಲಿ ಸಿನಿಮಾ ಚಿತ್ರಿಕರಣ ಮಾಡಲಾಗಿದೆ.
ಈಗಾಗಲೇ ಜೊತೆಯಾಗಿ ಹಿತವಾಗಿ ಸಿನಿಮಾ ಟ್ರೇಲರ್ ಯಶಸ್ವಿಯಾಗಿದೆ. ಚಿತ್ರದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. ಎಲ್ಲರೂ ಚಿತ್ರ ಮಂದಿರಕ್ಕೆ ಬಂದು ಚಿತ್ರ ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
Laxmi News 24×7