Breaking News

ಬೌದ್ಧ ಗಯಾವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರಿಸಿ… ಬೆಳಗಾವಿಯಲ್ಲಿ ಭಾರತೀಯ ಬೌಧ್ಧ ಮಹಾಸಭೆಯ ಪ್ರತಿಭಟನೆ

Spread the love

ಬೌದ್ಧ ಗಯಾವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರಿಸಿ…
ಬೆಳಗಾವಿಯಲ್ಲಿ ಭಾರತೀಯ ಬೌಧ್ಧ ಮಹಾಸಭೆಯ ಪ್ರತಿಭಟನೆ
ಬೌದ್ಧ ಗಯಾವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರಿಸಿ…
ಬೆಳಗಾವಿಯಲ್ಲಿ ಭಾರತೀಯ ಬೌಧ್ಧ ಮಹಾಸಭೆಯ ಪ್ರತಿಭಟನೆ
ಜಿಲ್ಲಾಧಿಕಾರಿಗಳ ಮೂಲಕ ಬಿಹಾರ ಸಿಎಂಗೆ ಮನವಿ
ಫೆಬ್ರವರಿ 12 ರಂದು ರಾಷ್ಟ್ರವ್ಯಾಪಿ ಆಂದೋಲನ
ಮಹಾಬೋಧಿ, ಮಹಾ ವಿಹಾರ, ಬೌದ್ಧ ಗಯಾವನ್ನು ಸಂಪೂರ್ಣವಾಗಿ ಬೌದ್ಧರಿಗೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿ ಬೆಳಗಾವಿಯಲ್ಲಿಂದು ಭಾರತೀಯ ಬೌದ್ಧ ಮಹಾಸಭೆಯ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಇಂದು ಬುಧವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಭಾರತೀಯ ಬೌದ್ಧ ಮಹಾಸಭೆಯ ಪದಾಧಿಕಾರಿಗಳು ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಬಿಹಾರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಜಾತಿವಾದಿ ಜನರ ಅಸ್ತಿತ್ವದಲ್ಲಿರುವ ಬೌದ್ಧ ಗಯಾದಲ್ಲಿನ ಬುದ್ಧವಿಹಾರವನ್ನು ಮುಕ್ತಗೊಳಿಸಬೇಕು. ಈ ಬೇಡಿಕೆಗಾಗಿ ದೇಶದಲ್ಲೆಡೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಇದು ನಿರಂತರವಾಗಿ ನಡೆದು, ಅಕ್ಟೋಬರ್ ಪಟ್ನಾ ಬಿಹಾರ ಮತ್ತು ಫೆಬ್ರವರಿ 12 ರಂದು ದೆಹಲಿಯಲ್ಲಿ ರಾಷ್ಟ್ರವ್ಯಾಪಿ ಬುದ್ಧ ವಿಹಾರ ಮುಕ್ತಿ ಕಾರ್ಯಕ್ರಮ ನಡೆಯಲಿದೆ ಎಂದು ರಾಷ್ಟ್ರೀಯ ಸಂಯೋಜಕ ಮಲ್ಲೇಶ್ ಚೌಗುಲೆ ಹೇಳಿದರು.
ಇನ್ನು ಬೆಳಗಾವಿ ಜಿಲ್ಲಾಧ್ಯಕ್ಷ ಯಮನಪ್ಪ ಗಡಿನಾಯಕ ಅವರು, ಬುದ್ಧವಿಹಾರವನ್ನು ಬೌದ್ಧರಿಗೆ ಹಸ್ತಾಂತರಿಸಬೇಕೆಂದು ನಿರಂತರವಾಗಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಬೌದ್ಧ ಬಿಹಾರ ಟ್ರಸ್ಟ’ನ್ನು ರದ್ಧುಗೊಳಿಸಬೇಕು. ಫೆಬ್ರುವರಿಯಿಂದ ಈ ಪ್ರತಿಭಟನೆ ಜಾರಿಯಲ್ಲಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿರಂತರವಾಗಿದೆ ಎಂದರು. 
ಈ ಸಂದರ್ಭದಲ್ಲಿ ವಿರೂಪಾಕ್ಷಿ ಮೇತ್ರಿ, ವಿನಾಯಕ ಕೋಲಕಾರ, ರಮೇಶ್ ಕಾಂಬಳೆ, ವಿದ್ಯಾ ಲಕ್ಕೋಳೆ, ಕಾವೇರಿ ಕಾಂಬಳೆ, ಆಶಾ ತುಬಚಿ, ರಮೇಶ್ ಶಿರೋಟೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ